ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆಗಿಳಿಯದ ಜನ, ಟ್ರಾಫಿಕ್‌ ಜಂಕ್ಷನ್‌ ಭಣಭಣ; ಸಿಲಿಕಾನ್‌ ಸಿಟಿ ಬಹುತೇಕ ಸ್ತಬ್ಧ!

ಬೆಂಗಳೂರು: ಎಮರ್ಜೆನ್ಸಿ ವಾಹನಗಳನ್ನು ಬಿಟ್ಟರೆ ಬೆಂಗಳೂರು ಬಹುತೇಕ ಸ್ತಬ್ಧವಾಗಿತ್ತು. ಹೊರವಲಯವಂತೂ ಅಕ್ಷರಶಃ ಲಾಕ್‌ ಡೌನ್ ನಂತೆಯೇ ಭಾಸವಾಗಿತ್ತು. ಬೆಂಗಳೂರಿನ ಅತಿ ಹೆಚ್ಚು ಟ್ರಾಫಿಕ್ ಜಂಕ್ಷನ್‌ ಗಳು ಕೂಡ ಭಣಗುಡುತ್ತಿದ್ದವು. ಪೊಲೀಸರು ನಮಗೇನು ಕೆಲಸ ಇಲ್ಲ ಎಂಬಂತೆ ರಿಲ್ಯಾಕ್ಸ್‌ ಮೂಡ್‌ ನಲ್ಲಿದ್ದಿದ್ದು ನಗರದ ಎಲ್ಲೆಡೆ ಕಂಡುಬಂದಿದೆ.

ಯಲಹಂಕ, ಹೆಬ್ಬಾಳ, ಗೊರಗುಂಟೆಪಾಳ್ಯ, ತುಮಕೂರು ರಸ್ತೆ, ಮೈಸೂರು ರಸ್ತೆ, ಮಾರತ್ತಹಳ್ಳಿ ಜಂಕ್ಷನ್ ಗಳು ‌ಜನ, ವಾಹನಗಳಿಲ್ಲದೆ ಪೇಲವಗೊಂಡಿತ್ತು. ಅಲ್ಲೊಂದು ಇಲ್ಲೊಂದು ವಾಹನ ಓಡಾಡುತ್ತಿದ್ದದ್ದು ಬಿಟ್ಟರೆ ಬೆಂಗಳೂರು ಮಹಾನಗರ ವೀಕೆಂಡ್ ಕರ್ಫ್ಯೂಗೆ ಬಹು ಉತ್ತಮವಾಗಿಯೇ ಸ್ಪಂದಿಸಿದೆ.

ನಗರ ಪೊಲೀಸರ ಕಟ್ಟೆಚ್ಚರ,‌ ಕೊರೊನಾ- ಒಮಿಕ್ರಾನ್ ಹೆಚ್ಚಳದ ಆತಂಕದೊಂದಿಗೆ ಎಲ್ಲಿ ಪೊಲೀಸರು ತಮ್ಮ ವಾಹನ ಸೀಜ್ ಮಾಡಿ ಕೇಸ್ ಹಾಕ್ತಾರೋ ಎಂಬ ಭೀತಿಯಲ್ಲಿ ಜನ ರಸ್ತೆಗೆ ಬಂದಿಲ್ಲ. ಒಟ್ಟಾರೆ ಬೆಂಗಳೂರಿನ ಕರ್ಫ್ಯೂ ಶೇ.95 ಸಕ್ಸಸ್ ಆಗಿದೆ ಎನ್ನುವುದು ಅತಿಶಯೋಕ್ತಿಯಲ್ಲ.

Edited By : Nagesh Gaonkar
Kshetra Samachara

Kshetra Samachara

09/01/2022 08:43 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ