ಬೆಂಗಳೂರು: ಟ್ರಾಫಿಕ್ ನಿಯಮಗಳ ಪಾಠ ಮಾಡುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿದರೆ ಹೇಗೆ ಸ್ವಾಮಿ. ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಹಿಳಾ ಕಾನ್‌ಸ್ಟೇಬಲ್‌ಗೆ ಮಹಿಳೆಯೊಬ್ಬರು ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಲತಾ ವೆಂಕಟ್ ಎಂಬುವರು ಮೊದಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಅವರು ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಇತರರ ಪ್ರೋಫೈಲ್‌ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ ಗೊತ್ತಾ?: ಲೇಡಿ ಕಾನ್‌ಸ್ಟೇಬಲ್‌ಗಳು ಹೆಲ್ಮೇಟ್ ಹಾಕದೆ ಸ್ಕೂಟಿ ಮೇಲೆ ತ್ರಿಬಲ್ ರೈಡಿಂಗ್ ಹೊರಟಿದ್ದ ದೃಶ್ಯವನ್ನು ಮಹಿಳೆಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮತ್ತೊಂದು ಕಡೆ ಸ್ಕೂಟಿ ಹಿಂಬದಿಯಲ್ಲಿ ಕುಳಿದಿದ್ದ ಮಹಿಳಾ ಪೊಲೀಸ್ ಕೂಡ ಹೆಲ್ಮೇಟ್ ಹಾಕದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ವಿಡಿಯೋ ರೆಕಾರ್ಡ್ ಮಾಡಿದ ಮಹಿಳೆಯು, ಕಾನ್‌ಸ್ಟೇಬಲ್‌ಗಳಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ಕೇಳಬಹುದಾಗಿದೆ.
Kshetra Samachara
23/11/2021 01:28 pm