ಆನೇಕಲ: ಪ್ರೀತಿಗೆ ಯಾವುದೇ ರೀತಿ ಕಟ್ಟುಪಾಡು ಇಲ್ಲ. ಅಂತೆಯೇ ಇಲ್ಲೊಂದು ಜೋಡಿ ಅಂಬೇಡ್ಕರ್ ಪ್ರತಿಮೆ ಎದುರು ಬೌದ್ಧ ಸಂಪ್ರದಾಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ಗ್ರಂಥಾಲಯದಲ್ಲಿ ಹೀಗೊಂದು ಮದುವೆ ನೆರವೇರಿದೆ. ವೀರೇಶ್ ಮತ್ತು ಅನುಪಮಾ ಬೌದ್ಧ ಸಂಪ್ರದಾಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ್ರು. ಅನುಪಮಾ ಮೂಲತಃ ಬಾಗಲಕೋಟೆಯವರು. ವೀರೇಶ್ ಅತ್ತಿಬೆಲೆ ಗ್ರಾಮದ ಬಳ್ಳೂರು ನಿವಾಸಿ. ಇಬ್ಬರೂ ಕಾಲೇಜಿನಲ್ಲಿ ಓದುವಾಗ ಇಬ್ಬರ ಪರಿಚಯವಾಗಿ ಪ್ರೀತಿಸಲು ಶುರು ಮಾಡಿದ್ದಾರೆ. ೫ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿಸಿದ್ರು. ಬಳಿಕ ಪೋಷಕರು ಅಡ್ಡಿ ಪಡಿಸಿದ ಪರಿಣಾಮ ಮನೆ ಬಿಟ್ಟು ಬಂದು ಆನೇಕಲ್ ನ ಅಂಬೇಡ್ಕರ್ ಪ್ರತಿಮೆಯ ಎದುರು ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ನೇಹಿತರ ಜೊತೆಗೂಡಿ ಮತ್ತು ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ನ ಪ್ರಮುಖರ ಜೊತೆಗೂಡಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ವೇಳೆ ತಮಗೆ ಜೀವಭಯವಿದ್ದು, ಪೊಲೀಸರು ಅಭಯ ನೀಡಬೇಕು ಅಂತ ಮನವಿ ಮಾಡಿಕೊಂಡರು.
ಒಟ್ಟಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಅಂತೆಯೇ ಬದುಕುವ ಹಕ್ಕು ಈ ಜೋಡಿಗೂ ಸಿಗುವಂತಾಗಲಿ ಅನ್ನೋದೇ ನಮ್ಮ ಆಶಯ..
ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್, ಆನೇಕಲ್
PublicNext
01/09/2022 08:57 pm