ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ; ಫೋಟೋಗ್ರಾಫರ್ಸ್ ಖುಷಿ ಹವಾ

ದೇವನಹಳ್ಳಿ: ಸೂರ್ಯನೂ ಕಾಣದ ದೃಷ್ಟಿಕೋನ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗುತ್ತೆ ಅಂತಾರೆ. ಹೌದು... ಯಾರ ಕಣ್ಣಿಗೂ ಕಾಣದ, ಮನಸ್ಸಿಗೆ ಅನ್ನಿಸಿದ ಭಾವ- ಭಾವನೆಗಳನ್ನು ಸೆರೆ ಹಿಡಿಯುವವರೇ ಕ್ಯಾಮರಾಮೆನ್. ಇಂತಹ ಕ್ಯಾಮೆರಾ & ಕ್ಯಾಮರಾಮೆನ್‌ ಗಳಿಗೂ ತನ್ನದೇ ಆದ ಇತಿಹಾಸವಿದೆ, ನಡೆದು ಬಂದ ವೈಭವವಿದೆ. ಇದನ್ನೆಲ್ಲ‌ ನೆನೆಯುವ ದಿನವೇ ವರ್ಲ್ಡ್ ಪೋಟೋಗ್ರಫಿ ಡೇ.

ಛಾಯಾಗ್ರಹಣ (Photography) ಒಂದು ಕಲಾಪ್ರಕಾರ, ಕಲಾ ಮಾಧ್ಯಮವೂ ಹೌದು. 1837ರಲ್ಲಿ ಫ್ರಾನ್ಸ್ ದೇಶದ ಜೋಸೆಫ್ ನೈಸ್ಪೋರ್ ನೀಫ್ಸ್ & ಲೂಯಿಸ್ ಡಾಗೆರೆ ಅವರು ಡಾಗ್ಯರೋಟೈಪ್ ಕಂಡು ಹಿಡಿದರು. ಇದು ವಿಶ್ವದ ಮೊಟ್ಟ ಮೊದಲ ಛಾಯಾಗ್ರಹಣ (Photography). ಇದರ ಸವಿನೆನಪಿಗಾಗಿ ಫ್ರಾನ್ಸ್ ನ ಫ್ರೆಂಚ್ ಅಕಾಡೆಮಿ 1839ರ ಆಗಸ್ಟ್ 19ರಂದು ಡಾಗ್ಯುರೋಟೈಪ್ ಆವಿಷ್ಕಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರಿಂದ ಈ ದಿನವನ್ನು ವಿಶ್ವ ಛಾಯಾಗ್ರಹಣ ದಿನ ಎಂದು ಕರೆಯುತ್ತಾರೆ.

ಹೀಗೆ ದಿನದಿಂದ ದಿನಕ್ಕೆ ಡಿಜಿಟಲ್ ಮಾಧ್ಯಮವಾಗಿ ಬೆಳೆದು ಮೊಬೈಲಿನ ಸೆಲ್ಫಿ ಕಾಲಘಟ್ಟಕ್ಕೆ ಬಂದು ನಿಂತಿದೆ ಫೋಟೋಗ್ರಫಿ & ವೀಡಿಯೋಗ್ರಫಿ. ಬದಲಾಗುತ್ತಿರುವ ದಿನಗಳಲ್ಲಿ ಎಲ್ಲರನ್ನೂ ಚೆನ್ನಾಗಿ ಕಾಣುವಂತೆ ಮಾಡುವ ನಮ್ಮನ್ನು ಸರ್ಕಾರ ಚೆನ್ನಾಗಿ ನೋಡಬೇಕಿದೆ ಅಂತಾರೆ ಫೋಟೋಗ್ರಾಫರ್ಸ್.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ದೇವನಹಳ್ಳಿ ತಾಲೂಕಿನ ಪೋಟೋಗ್ರಾಫರ್ಸ್ ಅಸೋಸಿಯೇಷನ್ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಿತು. ಕಾರ್ಯಕ್ರಮದಲ್ಲಿ ಹತ್ತಾರು ಫೋಟೋಗ್ರಾಫರ್ಸ್ ಭಾಗವಹಿಸಿ ದಿನಾಚರಣೆಗೆ ಕಳೆಗಟ್ಟಿದರು.

Edited By : Somashekar
PublicNext

PublicNext

20/08/2022 03:56 pm

Cinque Terre

25.49 K

Cinque Terre

0

ಸಂಬಂಧಿತ ಸುದ್ದಿ