ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸ್ವಾತಂತ್ರ್ಯ ಸೇನಾನಿ ಟಿ.ಡಿ. ಮಾರಣ್ಣ ಅವರ ಜೀವನಗಾಥೆಯನ್ನ ವಿಸ್ತೃತವಾಗಿ ಪರಿಚಯಿಸಿತ್ತು. ಟಿ.ಡಿ. ಮಾರಣ್ಣ ಅವರ ಹುಟ್ಟೂರು ಮಾಗಡಿಯ ತಟ್ಟೆಕೆರೆಯಲ್ಲಿರುವ ನಿವಾಸ ಅಳಿವಿನಂಚಿನಲ್ಲಿರುವ ಸುದ್ದಿ ಪ್ರಸಾರ ಮಾಡಿತ್ತು.
ಆ ಸ್ವಾತಂತ್ರ್ಯ ಹೋರಾಟಗಾರರ ಮನೆ ಮತ್ತು ಸಮಾಧಿ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಆ ಮನೆ ಮತ್ತು ಮಾರಣ್ಣನವರ ಕುರಿತು ಮುಂದಿನ ಪೀಳಿಗೆಗೆ ಅವರ ಹೋರಾಟದ ಕಥೆಯನ್ನ ಸಾರುವಂತಾಗಬೇಕು ಎಂದು ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು.
ಸದ್ಯ ಪಬ್ಲಿಕ್ ನೆಕ್ಸ್ಟ್ ವರದಿ ನೋಡಿದ ಮಾರಣ್ಣ ಅವರ ಪುತ್ರಿ ವಿಜಯಲಕ್ಷ್ಮಿ ನಮ್ಮ ವರದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟು ವರ್ಷ ಯಾವ ಮಾಧ್ಯಮವೂ ತಂದೆಯ ಬಗ್ಗೆ ವರದಿ ಮಾಡಿರಲಿಲ್ಲ. ಪಬ್ಲಿಕ್ ನೆಕ್ಸ್ಟ್ ಈ ಕಾರ್ಯ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ತಮ್ಮ ತಂದೆಯ ಬಗ್ಗೆ ಕೆಲ ಮಾಹಿತಿಯನ್ನ ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ಜೊತೆಗೆ ಹಂಚಿಕೊಂಡಿದ್ದಾರೆ.
PublicNext
16/08/2022 04:09 pm