ಬೆಂಗಳೂರು : ಬಿಟಿಎಂ ಲೇಔಟ್ ತಾವರೆಕೆರೆ ಆಲದಮರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬಿಬಿಎಂಪಿ ಮಾಜಿ ಮಹಾಪೌರರು ಮತ್ತು ಸ್ಥಳೀಯ ಕಾರ್ಪೊರೇಟರ್ ಬಿ ಎನ್ ಮಂಜುನಾಥ ರೆಡ್ಡಿ ಬಿಬಿಎಂಪಿ ಅಧಿಕಾರಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಆಲದ ಮರ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಕನ ಚಿಕಿತ್ಸೆಯ ವೆಚ್ಚ ಬಿಬಿಎಂಪಿ ಭರಿಸದೆ ಹೋಗಿದ್ದ ಸುದ್ದಿ ಪ್ರಸಾರ ಮಾಡಿತ್ತು.
ಇಂದು ಸ್ಥಳೀಯ ಕಾರ್ಪೊರೇಟರ್ ಮತ್ತು ಮಾಜಿ ಮಹಾಪೌರ ಬಿ ಎನ್ ಮಂಜುನಾಥ ರೆಡ್ಡಿ ಬಾಲಕನ ಕುಟುಂಬಕ್ಕೆ ಶೀಘ್ರ ಬಿಬಿಎಂಪಿಯಿಂದ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದ್ದಾರೆ.
PublicNext
14/07/2022 09:02 pm