ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಬಳ್ಳಾಪುರ ನಗರಸಭೆ, ಕೊಡಿಗೆಹಳ್ಳಿ ಗ್ರಾ.ಪಂ ಗಡಿ ಸಮಸ್ಯೆ; ಕಸ ವಿಲೇವಾರಿಗೆ ಹಿಂದೇಟು

ದೊಡ್ಡಬಳ್ಳಾಪುರ: ಕೊಡಿಗೆಹಳ್ಳಿ ಗ್ರಾಮ ಪಂಚಾಯತ್ ಮತ್ತು ದೊಡ್ಡಬಳ್ಳಾಪುರ ನಗರಸಭೆಯ ಗಡಿ ಸಮಸ್ಯೆಯಿಂದ ರಸ್ತೆಯಲ್ಲೇ ಕಸ ಕೊಳೆಯುತ್ತಿದೆ. ರಸ್ತೆ ತುಂಬೆಲ್ಲ ಕಸ ಹರಡಿದ್ದು ಜನರ ಓಡಾಟಕ್ಕೆ ತೊಂದರೆಯಾಗಿದೆ.

ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಮುಂಭಾಗ ರಸ್ತೆಯಲ್ಲಿ ಕಸ ವಿಲೇವಾರಿ ಜವಾಬ್ದಾರಿ ಯಾರಿಗೂ ಬೇಡವಾಗಿದೆ. ಈ ರಸ್ತೆ ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ದೊಡ್ಡಬಳ್ಳಾಪುರ ನಗರಸಭೆಯ ಗಡಿ ಭಾಗದಲ್ಲಿ ಬರುತ್ತದೆ. ಈ ರಸ್ತೆಯಲ್ಲಿ ಬಿದ್ದಿರುವ ಕಸವನ್ನ ಯಾರು ಸಂಗ್ರಹಿಸಬೇಕೆಂಬುದೇ ಎರಡು ಸ್ಥಳೀಯ ಸಂಸ್ಥೆಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ಜನರು ಸಹ ಇದೇ ಸ್ಥಳದಲ್ಲಿ ಕಸ ಎಸೆದು ಹೋಗುತ್ತಾರೆ. ಕಸ ಇರುವುದರಿಂದ ರಸ್ತೆಯಲ್ಲಿ ನಾಯಿ, ಹಂದಿಗಳು ಇಲ್ಲೇ ಓಡಾಡುತ್ತಲೇ ಇರುತ್ತವೆ. ಇದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ದೊಡ್ಡಬಳ್ಳಾಪುರ ನಗರಸಭೆಯ ಕಸ ಸಂಗ್ರಹದ ವಾಹನ ಇದೇ ರಸ್ತೆಯ ಅಂಚಿನವರೆಗೂ ಬಂದು ಕಸ ಸಂಗ್ರಹಿಸುತ್ತಾರೆ. ಆದರೆ ಇಲ್ಲಿ ಬಿದ್ದಿರುವ ಕಸ ಮಾತ್ರ ಕಾಣಿಸುತ್ತಿಲ್ಲ, ಇನ್ನೂ ಕೊಡಿಗೆಹಳ್ಳಿ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿಯೇ ಸರಿಯಾಗಿ ಕಸ ಸಂಗ್ರಹಿಸುತ್ತಿಲ್ಲ. ಇನ್ನು ಈ ರಸ್ತೆಯಲ್ಲಿನ ಕಸ ಸಂಗ್ರಹಿಸುವುದು ಅಸಾಧ್ಯದ ಮಾತು.

ಸ್ವಚ್ಛ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರು ದೊಡ್ಡಬಳ್ಳಾಪುರ ನಗರಸಭೆಗೆ ಈ ರಸ್ತೆಯ ಕಸ ಕಾಣಿಸದೆ ಇರೋದು ಸಹ ಸ್ವಚ್ಛ ನಗರವನ್ನೇ ಅಣಕು ಮಾಡುವಂತ್ತಿದೆ.

Edited By : Manjunath H D
Kshetra Samachara

Kshetra Samachara

16/08/2022 11:43 am

Cinque Terre

4.15 K

Cinque Terre

0

ಸಂಬಂಧಿತ ಸುದ್ದಿ