ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ: ನೀರಿನ ಸಮಸ್ಯೆಗೆ ಕೊನೆಗೂ ಸಿಕ್ತು ಮುಕ್ತಿ

ಬೆಂಗಳೂರು: ಕಳೆದ 3 ದಿನದ ಹಿಂದಷ್ಟೇ ಕೆಂಗೇರಿಯ ರೈಲ್ವೆ ಸ್ಟೇಷನ್ ರಸ್ತೆ ಸಮೀಪದ ಜನ ನೀರಿಲ್ಲದೆ, ಪರದಾಡುತ್ತಿದ್ರು. 15 ದಿನಗಳಿಂದ ಈ ಬೀದಿಗೆ ನೀರು ಇರಲಿಲ್ಲ. ಕಾವೇರಿ ನೀರು ಸಹ ಬಿಟ್ಟಿರಲಿಲ್ಲ. ಹೀಗಾಗಿ ಪಬ್ಲಿಕ್ ನೆಕ್ಸ್ಟ್ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ,ಈ ಬಗ್ಗೆ ವರದಿ ಬಿತ್ತರಿಸಲಾಗಿತ್ತು. ವರದಿಯ ಫಲಶ್ರುತಿಯಾಗಿ ಅಂದೇ ಬೋರ್ ವೆಲ್ ಗಳನ್ನ ರಿಪೇರಿ ಮಾಡಿಸಿ, ಕಾವೇರಿ‌ ನೀರನ್ನೂ ಮನೆಗಳಿಗೆ ಬಿಟ್ಟಿದ್ದಾರೆ.

ಇಲ್ಲಿ ಜನರು ನಿತ್ಯವೂ ನೀರಿಗಾಗಿ ಪರದಾಟ ಅನುಭವಿಸುತ್ತಿದ್ರು. ನೀರು ಬರಲ್ಲ, ಕಾವೇರಿ ಬಿಲ್ ಮಾತ್ರ ಬರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿದ ವರದಿ ಅಧಿಕಾರಿಗಳ‌ ತನಕ ಮುಟ್ಟಿತ್ತು.

ನಾವು ಸ್ಟೋರಿ ಮಾಡಿದ ರಾತ್ರಿಯೇ ಆ ಏರಿಯಾದಲ್ಲಿ ಕೆಟ್ಟಿದ್ದ ಬೋರ್ ವೆಲ್ ಗಳನ್ನ ರೆಡಿ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

11/08/2022 05:45 pm

Cinque Terre

29.06 K

Cinque Terre

1

ಸಂಬಂಧಿತ ಸುದ್ದಿ