ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸ್ ನಿಲ್ದಾಣದಲ್ಲಿ ಅಕ್ರಮ ಜಾಹೀರಾತು ಫಲಕಕ್ಕೆ ವ್ಯಕ್ತಿ ಬಲಿ ಪ್ರಕರಣ - ಬಿಬಿಎಂಪಿ ನೋಟಿಸ್

ಬೆಂಗಳೂರು - ಬಸ್ ನಿಲ್ದಾಣಕ್ಕೆ ಅಳವಡಿಸಿದ್ದ ಅಕ್ರಮ ಜಾಹೀರಾತು ಫಲಕದ ಮೆಟೆಲ್ ಬೋರ್ಡ್ ತಗಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ (ಶನಿವಾರ) ಹೆಬ್ಬಾಳದಲ್ಲಿ ನಡೆದಿತ್ತು. ಈ ಸಂಬಂಧ ಅಕ್ರಮ ಜಾಹೀರಾತು ಅಳವಡಿಸಿದ್ದ ಸಂಸ್ಥೆಗೆ ನೋಟಿಸ್ ನೀಡಲು ಬಿಬಿಎಂಪಿ ಮುಂದಾಗಿದೆ. ಪಾಲಿಕೆ ಜಾಹೀರಾತು ವಿಭಾಗದ ಅಧಿಕಾರಿ ಗಳು ನೋಟಿಸ್ ನೀಡಲಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಪಿ.ಎನ್. ರವೀಂದ್ರ ತಿಳಿಸಿದರು.

ಇಲ್ಲಿನ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ 9.30ರ ಸಮಯಕ್ಕೆ ವ್ಯಕ್ತಿ ಕುಳಿತಕೊಂಡ ಸಂದರ್ಭದಲ್ಲಿ ಮೆಟಲ್ ಬೋರ್ಡ್ ನಿಂದ ಶಾಕ್ ಹೊಡೆದಿದೆ. ಆ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ.

ಟೈಮ್ಸ್ ಇನೋವಿಟಿವ್ ಮೀಡಿಯಾ ಹೆಸ್ರಿನ ಜಾಹೀರಾತು ಕಂಪನಿ ಬಸ್ ನಿಲ್ದಾಣದ ಸಮೀಪದ ವಿದ್ಯುತ್ ಕಂಬಂದಿಂದ ಅಕ್ರಮವಾಗಿ ಇದ್ಯುತ್ ಪಡೆದು ಡಿಜಿಟಲ್ ಮೆಟಲ್ ಬೋರ್ಡ್ ಅಳವಡಿಕೆ ಮಾಡಿತ್ತು.

Edited By : PublicNext Desk
Kshetra Samachara

Kshetra Samachara

17/05/2022 07:45 pm

Cinque Terre

838

Cinque Terre

0

ಸಂಬಂಧಿತ ಸುದ್ದಿ