ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿವೇಶನ ಇ-ಹರಾಜು ಪ್ರಕ್ರಿಯೆ; ಉತ್ತಮ ಸ್ಪಂದನೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2021ರ ಡಿಸೆಂಬರ್ ನಲ್ಲಿ ಹಮ್ಮಿಕೊಂಡಿದ್ದ ಇ-ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಒಟ್ಟು 372 ನಿವೇಶನಗಳನ್ನು ಇ-ಹರಾಜಿನಲ್ಲಿ ಉಲ್ಲೇಖಿಸಿದ್ದು, 296 ನಿವೇಶನಗಳು ಮಾರಾಟವಾಗಿದೆ. 296 ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 215 ಕೋಟಿಗಳಾಗಿದ್ದು, ಸದರಿ ನಿವೇಶನಗಳು ರೂ. 348 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 133 ಕೋಟಿಗಳಷ್ಟು ಅಧಿಕ ಆದಾಯ ಸಂಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 118 ಮೂಲೆ ನಿವೇಶನಗಳನ್ನು ಇ-ಹರಾಜಿನಲ್ಲಿ ಪ್ರಕಟಿಸಲಾಗಿದ್ದು, ಇವುಗಳಲ್ಲಿ 80 ಮೂಲೆ ನಿವೇಶಗಳು ಹರಾಜಿನಲ್ಲಿ ಮಾರಾಟವಾಗಿದೆ. ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 44.28 ಕೋಟಿಗಳಾಗಿದ್ದು, ರೂ. 63.59 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 19.31 ಕೋಟಿಗಳಷ್ಟು ಅಧಿಕ ಆದಾಯ ಮೊತ್ತ ಸಂಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗರಿಷ್ಠ ರೂ. 6,60 8/- ಪ್ರತಿ ಚದರ ಅಡಿ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ಗರಿಷ್ಠ ರೂ. 14,368/- ಪ್ರತಿ ಚದರ ಅಡಿಗೆ ಮಾರಾಟವಾಗಿದೆ. ಮುಂದಿನ ಜನವರಿಯಲ್ಲಿ ಸುಮಾರು 500 ಮೂಲೆ ನಿವೇಶನಗಳು ಹಾಗೂ 500 ಮಧ್ಯಂತರ ನಿವೇಶನಗಳ ಇ-ಹರಾಜು ನಡೆಸಲಾಗುವುದು ಎಂದು ಬಿಡಿಎ ತಿಳಿಸಿದೆ.

Edited By : Nirmala Aralikatti
Kshetra Samachara

Kshetra Samachara

01/01/2022 11:24 am

Cinque Terre

1.43 K

Cinque Terre

0

ಸಂಬಂಧಿತ ಸುದ್ದಿ