ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು- ಮುರಿದು ಬಿದ್ದ 20 ವಿದ್ಯುತ್ ಕಂಬಗಳು

ಬೆಂಗಳೂರಿನ ಹಲವೆಡೆ ತಡರಾತ್ರಿ ಸುರಿದ ಬಿರುಗಾಳಿ, ಮಿಂಚು ಸಹಿತ ಧಾರಾಕಾರ ಮರಗಳು ಧರೆಗುರುಳಿವೆ. ಪರಿಣಾಮ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ರೆ, ಟಿಸಿಗಳು ಕೆಟ್ಟು ಹೋಗಿವೆ.

ಇನ್ನೂ ನೆಲಮಂಗಲ ತಾಲೂಕು ಭಟ್ಟರಹಳ್ಳಿ, ಯರ್ರಮಂಚನಹಳ್ಳಿ, ಬೈರಶೆಟ್ಟಹಳ್ಳಿ, ಮೈಲನಹಳ್ಳಿ, ಅರಳಸಂದ್ರ ಸೇರಿದಂತೆ ಬೆಂಗಳೂರು ಉತ್ತರ ತಾಲ್ಲೂಕಿನ ಗೋಪಾಲಪುರ, ಹುಸ್ಕೂರು, ಆಲೂರು ಸೇರಿದಂತೆ ಇನ್ನೂ ಹಲವೆಡೆ ರಾತ್ರಿ ಬೀಸಿದ ಗಾಳಿಗೆ ಕಂಬಗಳು ಮುರಿದು ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಸಂಬಂಧ ಸ್ಥಳಕ್ಕೆ ನೆಲಮಂಗಲ ಬೆಸ್ಕಾಂ ಇಲಾಖಾಧಿಕಾರಿಗಳು ಭೇಟಿ ನೀಡಿ ಇಲಾಖೆ ಸಿಬ್ಬಂದಿಯಿಂದ ವಿದ್ಯುತ್ ಕಂಬ ದುರಸ್ಥಿ ಕಾರ್ಯ ನಡೆಯುತ್ತಿದೆ.

Edited By :
Kshetra Samachara

Kshetra Samachara

06/06/2022 01:11 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ