ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆರೆ ಏರಿಗೆ ಕಿಡಿಗೇಡಿಗಳಿಂದ ಕಂದಕ: ಗ್ರಾಮಸ್ಥರ ಆಕ್ರೋಶ

ನೆಲಮಂಗಲ: ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಅಬ್ಬರ ಹಿನ್ನಲೆ 35 ವರ್ಷಗಳ ಬಳಿಕ ನೆಲಮಂಗಲ ತಾಲ್ಲೂಕಿನ ಲಕ್ಕೂರು ಕೆರೆ ತುಂಬಿ ಹರಿದಿದೆ. ಹಾಗಾಗಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಬಾಗಿನ ಸಮರ್ಪಣೆ ಮಾಡಿದ್ದಾರೆ. ತಾಲ್ಲೂಕಿನ ಸೋಂಪುರ ಹಾಗೂ ಅಗಳಕುಪ್ಪೆ 2 ಗ್ರಾಮ ಪಂಚಾಯ್ತಿಗಳಿಗೆ ಸೇರಿದ ಬೃಹತ್ ಕೆರೆಯಾಗಿದೆ.

ಇನ್ನು ನೆಲಮಂಗಲ ತಾಲ್ಲೂಕು ತಿಮ್ಮನಾಯ್ಕನಹಳ್ಳಿ ಗ್ರಾಮದ ಏರಿ ಮೇಲೆ ಕಿಡಿಗೇಡಿಗಳು ಮಾಡಿದ ಕಂದಕ ನಿರ್ಮಾಣದಿಂದ ಸುಮಾರು 2 ಅಡಿಯಷ್ಟು ನೀರು ಕೆರೆಯಿಂದ ಹೊರಹೋಗಿದೆ. ಅದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಅಡಿಕೆ ತೋಟಕ್ಕೆ ನೀರಿನ ಪ್ರಮಾಣ ಹೆಚ್ಚಾಗಿ ಬೆಳೆ ಹಾಳುಗುತ್ತೆ ಎಂದು ಕೆರೆಗೆ ಕಂದಕ ತೊಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೆರೆ ಕೋಡಿ ಏರಿ ಒಡೆದರೆ ಸುಮಾರು 5-6 ಗ್ರಾಮಗಳು ಜಲಾವೃತ ಸಾಧ್ಯತೆಯಿದೆ ಎಂದು ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ಈ ಸಂಬಂಧ ಕೂಡಲೇ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ..

Edited By : Somashekar
PublicNext

PublicNext

05/08/2022 02:34 pm

Cinque Terre

27.14 K

Cinque Terre

0

ಸಂಬಂಧಿತ ಸುದ್ದಿ