ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದಾಗಿ ಕರ್ನಾಟಕದಲ್ಲಿ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. 108 ನಂಬರ್‌ನ ಸೇವೆ ಎಷ್ಟೋ ದೂರವಾಣಿ ಕರೆಗಳು ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಪರಿಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ.
ಹೌದು, ತುರ್ತು ಆರೋಗ್ಯ ಸೇವೆ ಪಡೆಯಲು 108ನಂಬರ್‌ಗೆ ಕರೆ ಮಾಡಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್ ನಮ್ಮ ಮುಂದಿರುತ್ತದೆ. ಆದ್ರೀಗಾ ಆಂಬುಲೆನ್ಸ್ ನಲ್ಲಿ ವತ್ಯಯ ಕಾಣ್ತಿದೆ. ಇದಕ್ಕೆ 108 ನಿರ್ವಹಣಾ ಜಿವಿಕೆ ಸಂಸ್ಥೆಯು 15 ವರ್ಷಗಳಷ್ಟು ಹಳೆಯ ಸಾಫ್ಟ್ ವೇರ್ ಅನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಆಂಬುಲೆನ್ಸ್ ಸಮಸ್ಯೆ ಸೇವೆ ವ್ಯತ್ಯಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಸಂಬಂಧ 108 ಕರೆ ಸ್ವೀಕರಿಸುವ ಸಿಬ್ಬಂದಿ ಮತ್ತು ಸಂಬಂಧಿಸಿದ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಬಳಿಕ ಈ ಕುರಿತು ಮಾಹಿತಿ ನೀಡಿರುವ ಅವರು, ತಾಂತ್ರಿಕ ದೋಷವಿರುವ ಹಿನ್ನೆಲೆಯಲ್ಲಿ ಸಮರ್ಪಕ ಕರೆಗಳ ಸಂಪರ್ಕ ಸಾಧ್ಯವಾಗಿಲ್ಲ. ಅಲ್ಲಿಯವರೆಗೆ ಖಾಸಗಿ ಸಂಸ್ಥೆಯ ಆರೋಗ್ಯ ಸೇವೆ ಬಳಸಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
PublicNext
13/10/2022 04:54 pm