ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೌನ್ ಹಾಲ್ ಬಾಡಿಗೆ ದರ ಪರಿಷ್ಕರಣೆ

ಬೆಂಗಳೂರು: ಟೌನ್ ಹಾಲ್ ಬಾಡಿಗೆ ದರ ಪರಿಷ್ಕರಣೆ ಮಾಡಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಆದೇಶ ಹೊರಡಿಸಿದ್ದಾರೆ. ಟೌನ್ ಹಾಲ್ ಎಂದೇ ಪ್ರಸಿದ್ಧವಾಗಿರುವ ಸರ್ ಪುಟ್ಟಣ ಚೆಟ್ಟಿ ಪುರಭವನದ ಬಾಡಿಗೆ ದರ ಪರಿಷ್ಕರಣೆಗೆ ಸೂಜಿಸಲಾಗಿದ್ದು ಸೆಪ್ಟೆಂಬರ್ 1ರಿಂದ ಇದು ಜಾರಿಗೆ ಬರಲಿದೆ. ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಶೇಕಡ 50 ರಿಯಾಯಿತಿಯನ್ನೂ ಬಿಬಿಎಂಪಿ ಘೋಷಿಸಿದೆ.

ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸುವ ಸಲುವಾಗಿ ಪಾಲಿಕೆಯ ಒಡೆತನದಲ್ಲಿರುವ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದ ಬಾಡಿಗೆ ದರ ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಪೂರ್ತಿ ದಿನ(ಬೆಳಗ್ಗೆ 8.00 ರಿಂದ ರಾತ್ರಿ 10.00 ಗಂಟೆಯವರೆಗೆಕ ಎ.ಸಿಇದ್ದರೆ 75,000 ರೂ. ಹಾಗೂ ನಾನ್ ಎ.ಸಿ ಗೆ 60,000 ರೂ. ನಿಗದಿಪಡಿಸಲಾಗಿತ್ತು.

ಇದೀಗ ದರ ಪರಿಷ್ಕರಿಸಿದ್ದು, ಪೂರ್ತಿ ದಿನಕ್ಕೆ ಎ.ಸಿಗೆ 60,000 ರೂ. ಹಾಗೂ ನಾನ್ ಎ.ಸಿಗೆ 50,000 ದರ ನಿಗದಿಪಡಿಸಲಾಗಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ. ಕನ್ನಡ ರಂಗಭೂಮಿಯ ಎಲ್ಲಾ ನಾಟಕ – ಪ್ರಸಂಗಗಳಿಗೆ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಪರಿಷ್ಕೃತ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಆದೇಶ ಹೊರಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

29/08/2022 08:59 pm

Cinque Terre

1.43 K

Cinque Terre

0

ಸಂಬಂಧಿತ ಸುದ್ದಿ