ಬೆಂಗಳೂರು: ಕೆರೆಗಳ ನಗರಿ ಖ್ಯಾತಿಯ ಬೆಂಗಳೂರು ಈಗ ಕಾಂಕ್ರೀಟ್ ನಾಡಾಗಿ ಪರಿಣಮಿಸಿದೆ. ಒತ್ತುವರಿ, ಕಲುಷಿತ ಸೇರೆದಿಂತೆ ನಾನಾ ಕಾರಣಕ್ಕೆ ಕೆರೆಗಳು ಕಾಣೆಯಾಗಿದೆ. ಈ ಬಗ್ಗೆ ಹೈಕೋರ್ಟ್ ಬಿಬಿಎಂಪಿ ಅಧಿಕಾರಿಗಳಿಗೆ ಚಾಟಿಯೇಟು ಬೀಸಿದೆ. ಕೆರೆಗಳ ಒತ್ತುವರಿ ತೆರವಿಗೆ ಪಾಲಿಕೆ ಕೋರ್ಟ್ 10 ದಿನಗಳ ಡೆಡ್ ಲೈನ್ ನೀಡಿದೆ.
ಕೆರೆಗಳ ಒತ್ತುವರಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಒತ್ತುವರಿದಾರರ ವಿರುದ್ಧ ಕೆಂಡಾ ಮಂಡಲವಾಗಿರುವ ನ್ಯಾಯಾಲಯವು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಒಂದು ವೇಳೆ ಕ್ರಮ ಜರುಗಿಸದ ಪಾಲಿಕೆ ಎಂಜನಿಯರ್‌ಗಳನ್ನು ಅಮಾನತ್ತು ಮಾಡಬೇಕಾದಿತು ಎಂದು ಹೈಕೋರ್ಟ್ ಪಾಲಿಕೆ ನಿನ್ನೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಕೆರೆಗಳ ಸಮೀಕ್ಷೆ ವರದಿ ಸಿದ್ಧತೆಗೆ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ನಿರ್ಲಕ್ಷ್ಯ ವಹಿಸುವ ಕೆಳ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ ತಿಳಿಸಿದ್ದಾರೆ.
Kshetra Samachara
28/07/2022 03:59 pm