ಬೆಂಗಳೂರು: ನೋಡಲು ಎಷ್ಟು ಚೆನ್ನಾಗಿದೆ ಈ ರಸ್ತೆ. ಒಂದು ಚೂರು ಗುಂಡಿ, ಹಳ್ಳ ಇಲ್ಲ. ವಾಹನ ಸವಾರರು ಇಲ್ಲಿ ಗಾಡಿ ಓಡಿಸಲು ಬಹಳ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ತೋರಿಸುತ್ತಿರುವ ಈ ರಸ್ತೆ ಸಿಲಿಕಾನ್ ಸಿಟಿಯ ಜ್ಞಾನಭಾರತಿಯಿಂದ ಯುನಿವರ್ಸಿಟಿ ಗೇಟ್ ತನಕ ಹೋಗುವ ರಸ್ತೆ. ಈ ರಸ್ತೆ ಇಷ್ಟು ಚೆನ್ನಾಗಿದ್ರು ಇಲ್ಲೊಂದು ಸಮಸ್ಯೆ ಇದೆ ಸ್ವಾಮಿ. ಏನಂತೀರಾ ನೀವೇ ನೋಡಿ.
ಇಲ್ಲಿ ಒಂದು ಕಡೆಯೂ ಒಂದು ಸ್ಪೀಡ್ ಬ್ರೇಕರ್ ಇಲ್ಲ. ಎಲ್ಲೂ ಸಹ ವಾಹನಗಳು ಸ್ಟಾಪ್ ಆಗಲ್ಲ. ಆದರೆ ನಾಗರಭಾವಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ, ಕೆಂಗೇರಿ ಕಡೆಯಿಂದ ವಾಹನಗಳು ಈ ರಸ್ತೆಗೆ ಬಂದು ಸೇರುತ್ತವೆ. ಸ್ಪೀಡ್ ಬ್ರೇಕರ್ ಇಲ್ಲ ಅಂದ್ರೆ ಹೇಗೆ ಗಾಡಿಗಳನ್ನ ನಿಧಾನವಾಗಿ ಓಡಿಸುತ್ತಾರೆ. ಪ್ರಧಾನಿ ಮೋದಿ ಬರ್ತಾರೆ ಅಂತ ಹೆಂಗಂದ್ರೆ ಹಂಗೆ ಕಾಮಗಾರಿ ಮಾಡಿ ಇವತ್ತು ಜನರ ಪ್ರಾಣದ ಜೊತೆ ಆಟವಾಡ್ತಿದ್ದಾರೆ. ಸ್ಪೀಡ್ ಬ್ರೇಕರ್‌ಗಳು ಇಲ್ಲದೆ ಪರಿಣಾಮ ಇಲ್ಲಿ ಸುಮಾರು ಆಕ್ಸಿಡೆಂಟ್‌ಗಳು ಸಂಭವಿಸುತ್ತಿವೆ. ಒಂದು ದಿನದ ಕಾರ್ಯಕ್ರಮಕ್ಕಾಗಿ ವರ್ಷಗಟ್ಟಳೆ ಇರುವ ರಸ್ತೆಯನ್ನು ಒಂದು ಚೂರು ಪ್ಲಾನಿಂಗ್ ಮಾಡದೆ ಡಾಂಬರು ಮಾಡಿದ್ದಾರೆ. ಇದ್ರಿಂದ ಜೋರಾಗಿ ಬಂದ ಗಾಡಿಗಳು ಅಡ್ಡಬಂದ ಗಾಡಿಗಳನ್ನ ಗುದ್ದಿ, ವಾಹನ ಸವಾರರಿಗೆ ಗಾಯಗಾಳಾಗಿ ಆಸ್ಪತ್ರೆ ಸೇರ್ತಿದ್ದಾರೆ.
ಇನ್ನೂ ಇದ್ರ ಬಗ್ಗೆ ಹಿರಿಯ ನಾಗರಿಕರನ್ನ ಕೇಳಿದ್ರೆ, ಈ ರಸ್ತೆ ಆದ್ರು ಇಷ್ಟು ಚೆನ್ನಾಗಿದೆ. ಇನ್ನೂ ಸ್ವಲ್ಪ ಮುಂದೆ ಹೋಗಿ ನೋಡಿ, ಓಡಾಡಲು ಆಗದಷ್ಟು ರಸ್ತೆ ಹಾಳಾಗಿದೆ. ನಮ್ಮ ಕರ್ಮ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರಸ್ತೆಗಳ ಸಮಸ್ಯೆ ಬಗೆ ಹರೆಯುತ್ತಿಲ್ಲ.
ವರದಿ: ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
13/07/2022 07:22 pm