ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಾಲ್ಕು ಪ್ಲೈ ಓವರ್ ಗೆ ಸರ್ಕಾರ ಅಸ್ತು...!

ಬೆಂಗಳೂರು: ನಗರದಲ್ಲಿ ಸಂಚಾರ ಸುಗಮಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಇದರ ಬೆನ್ನಲ್ಲೇ ಮಹಾನಗರ ಪಾಲಿಕೆ ನಾಲ್ಕು ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ.

ರಾಜ್ಯ ಸರ್ಕಾರದ ಅಮೃತ ನಾಗೋತ್ಥಾನದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು ಏಳು ಮೇಲ್ಸೇತುವೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಜೆಸಿ ರಸ್ತೆ ಫ್ಲೈಓವರ್ ಒಂದು ಪ್ರಮುಖ ಯೋಜನೆಯಾಗಿದ್ದು, ಒಮ್ಮೆ ಪೂರ್ಣಗೊಂಡ ನಂತರ, ಇದು ಎರಡು ಬದಿಯ ವಾಹನ ಸಂಚಾರದೊಂದಿಗೆ ಸಿಟಿ ಮಾರ್ಕೆಟ್ ಫ್ಲೈಓವರ್ನ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಇತ್ತಮಡುವಿನಿಂದ ಕಾಮಕ್ಯ ಜಂಕ್ಷನ್ ಗೆ ಬಿಬಿಎಂಪಿ 40.50 ಕೋಟಿ ರೂ., ಬಸವೇಶ್ವರ ನಗರದಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆವರೆಗೆ 30.64 ರೂ., ಜೆಸಿ ರಸ್ತೆಯಿಂದ ಹಡ್ಸನ್ ವೃತ್ತಕ್ಕೆ 20. 64 ಕೋಟಿ ರೂ., ಸಾರಕ್ಕಿ ಜಂಕ್ಷನ್ನಿಂದ ಕನಕಪುರವರೆಗೆ ಅಂದಾಜು 20.64 ಕೋಟಿ ರೂ. ಹಾಗೂ ಮುಖ್ಯ ರಸ್ತೆಗೆ 130 ಕೋಟಿ ರೂ. ಅಂದಾಜಿಸಲಾಗಿದೆ.

ಇನ್ನು ರಾಜ್ಯ ಸರ್ಕಾರ ಈ ಬಗ್ಗೆ ಅನುಮತಿ ನೀಡಿದೆ. ಈ ಸಂಬಂಧ ಡಪಿಆರ್ ಕೂಡಾ ಸಿದ್ದವಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಟೆಂಡರ್ ಕರೆಯಲು ಮುಂದಾಗಿದೆ. ಸಹಜ ವಾಗಿ ಇದರಿಂದ ಸಂಚಾರ ದಟ್ಟಣೆ ನಿಯಂತ್ರಣ ಆಗುವ ಸಾಧ್ಯತೆಗಳಿವೆ.

Edited By : Somashekar
Kshetra Samachara

Kshetra Samachara

28/06/2022 07:44 pm

Cinque Terre

2.4 K

Cinque Terre

0

ಸಂಬಂಧಿತ ಸುದ್ದಿ