ಬೆಂಗಳೂರು: ಹಲವಾರು ತಿಂಗಳುಗಳಿಂದ ರಸ್ತೆ ಗುಂಡಿಗಳಿಂದ ಇಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು . ಈ ರಸ್ತೆ ಗುಂಡಿಗಳ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯ ನಂತರ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಈಗ ಬಂದು ಸಿಲ್ಕ್ ಬೋರ್ಡ್ ರಸ್ತೆಯ ಮೇಲಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ.
ಇದು ಬಿಟಿಎಂ ಲೇಔಟ್ ನಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕ ಮಾಡುತ್ತಿದ್ದ ಮುಖ್ಯರಸ್ತೆ. ಈ ರಸ್ತೆಯ ಮೇಲೆ ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಮತ್ತು ಇದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ.
ಮಳೆ ಬಂದು ನಿಂತ ಮೇಲೆ ರಸ್ತೆ ಸಂಪೂರ್ಣವಾಗಿ ಗುಂಡಿ ಮಯವಾಗಿತ್ತು. ಪಬ್ಲಿಕ್ ನೆಕ್ಸ್ಟ್ ವರದಿಯ ನಂತರ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯ ಮೇಲಿರುವ ಗುಂಡಿಗಳಿಗೆ ಟಾರ್ ಹಾಕಿ ಮುಚ್ಚಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
24/06/2022 07:51 pm