ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಹಾಗೋ ಹೀಗೋ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ. ಇದರ ನಡುವೆ ಬೆಂಗಳೂರು ಜನರಿಗೆ ಖುಷಿ ಕೊಡಲು ಬಿಎಂಆರ್‌ಸಿಎಲ್ ಮೂರನೇ ಹಂತದ ಯೋಜನೆ ಫೈನಲ್ ಮಾಡಿ ಸರ್ಕಾರದ ಒಪ್ಪಿಗೆಗೆ ಕಳುಹಿಸಲು ಸಿದ್ಧವಾಗಿದೆ. ಅಂದುಕೊಂಡಂತೆ ಮೂರನೇ ಹಂತದ ಮೆಟ್ರೋ ಆಗಿಬಿಟ್ಟರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತಷ್ಟು ತಗ್ಗಲಿದೆ.
3ನೇ ಹಂತದ ಮೆಟ್ರೋ ಪೇಪರ್ ವರ್ಕ್ ಕಂಪ್ಲೀಟ್
ಕೇಂದ್ರ, ರಾಜ್ಯ ಸರ್ಕಾರಕ್ಕೆ ಶೀಘ್ರ ಡಿಪಿಆರ್ ರವಾನೆ
ಮೂರನೇ ಹಂತದ ಡಿಪಿಆರ್ ಫೈನಲ್ ಆಗಿದ್ದು ಬಿಎಂಆರ್‌ಸಿಎಲ್ ಟೆಕ್ನಿಕಲ್ ಕಮಿಟಿಮುಂದೆ ಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.
ಸದ್ಯ ಮೂರನೇ ಹಂತದಲ್ಲಿ ಒಟ್ಟು 45 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವನ್ನು ರೂಪಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಜೆಪಿ ನಗರದಿಂದ ಹೆಬ್ಬಾಳವರೆಗಿನ 31 ಕಿಲೋಮೀಟರ್, ಹಾಗೂ ಹೊಸಹಳ್ಳಿ ಟು ಕಡಬವರೆಗೆ 11 ಕಿಲೋಮೀಟರ್ ಮೆಟ್ರೋ ನಿರ್ಮಾಣವಾಗಲಿದೆ. ಈ ಎರಡೂ ಕಾರಿಡಾರ್ ನಿಂದ ಒಟ್ಟು 31 ನಿಲ್ದಾಣಗಳು ತಲೆಎತ್ತಲಿವೆ. ಜೆಪಿ ನಗರದಲ್ಲಿ ಆರಂಭವಾಗೋ ಮೊದಲ ಲೈನ್ ಔಟರ್ ರಿಂಗ್ ರಸ್ತೆ ಮಾರ್ಗವಾಗಿ ರಾಜಕುಮಾರ್ ಸಮಾಧಿ ಮೂಲಕ ಹೆಬ್ಬಾಳ ಬಳಿ ಏರ್ಪೋರ್ಟ್ ಲೈನ್ ಜಾಯಿನ್ ಆಗಲಿದೆ. ಸದ್ಯ ಡಿಪಿಆರ್ ಫೈನಲ್ ಆಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಪ್ಪಿಗೆಕೊಟ್ಟಿದ್ದೇ ಆದ್ರೆ 2023ಕ್ಕೆ ಸಿವಿಲ್ ವರ್ಕ್ ಆರಂಭಿಸೋ ಲೆಕ್ಕಾಚಾರದಲ್ಲಿದೆ.
ಸದ್ಯ ಎರಡನೇ ಹಂತದ ಮೆಟ್ರೋ ಕಾಮಾಗಿರಿಯೇ ಕುಂಟುತ್ತಾ ತೆವಳುತ್ತಾ ಸಾಗ್ತಿದೆ. ಇದ್ರ ನಡುವೆ ಮೂರನೇ ಹಂತಕ್ಕೂ ಮೆಟ್ರೋ ಅಡಿಗಲ್ಲಿಡೋಕೆ ತುದಿಗಾಲಲ್ಲಿ ನಿಂತಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಮೂರನೇ ಹಂತದ ಎರಡೂ ಮಾರ್ಗಗಳು 2028ಕ್ಕೆ ಮುಗಿಸೋ ಗುರಿಯನ್ನ ನಮ್ಮ ಮೆಟ್ರೋ ಇಟ್ಟುಕೊಂಡಿದೆ. ಆದ್ರೆ ಡಿಪಿಆರ್ ಫೈನಲ್ ಮಾಡೋಕೆ ವರ್ಷಗಳ ಕಾಲ ಪಡೆದಿರೋ ಮೆಟ್ರೋ ಕಾಮಗಾರಿಯನ್ನ ನಿಗದಿತ ಅವಧಿಯಲ್ಲಿ ಮುಗಿಸುತ್ತಾ ಅನ್ನೋದೇ ಪ್ರಶ್ನೆ.
Kshetra Samachara
30/05/2022 07:24 pm