ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಪಾಲಿಕೆ ಸಭಾಂಗಣ ಆಧುನೀಕರಣ ಕಾಮಗಾರಿ ಟೆಂಡರ ರದ್ದುಗೊಳಿಸಲು ಆಗ್ರಹ

ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ರವರನ್ನ ಮತ್ತು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರನ್ನ ಮಾಜಿ ಆಡಳಿತ ಪಕ್ಷದ ನಾಯಕರುಗಳಾದ ಎಮ್.ಶಿವರಾಜು,ಸತ್ಯನಾರಾಯಣ್ ಮತ್ತು ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಬಿ.ಬಿ.ಎಂ.ಪಿ.ಕೌನ್ಸಿಲ್ ಸಭಾಂಗಣ ಮತ್ತು ಸ್ಥಾಯಿ ಸಮಿತಿ ಕೊಠಡಿ ವಿಸ್ತರಣೆ ಮಾಡಲು ಟೆಂಡರ್ ಕೊಟ್ಟಿರುವದನ್ನ ರದ್ದು ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಬೆಂಗಳೂರು ಮಹಾನಗರ ಪಾಲಿಕೆಗೆ ವಿಶೇಷ ಕಾಯಿದೆ ಜಾರಿಗೆ ಬಂದಿದ್ದು, ಈ ಕಾಯಿದೆಯಾನುಸಾರ 243 ಜನಪ್ರತಿನಿಧಿಗಳ ಆಯ್ಕೆಗೆ ಅವಕಾಶ ಕಲ್ಪಿಸಿದ್ದು, ಅದರೊಟ್ಟಿಗೆ ನಾಮನಿರ್ದೇಶನದ ಸದಸ್ಯರೂ, ಸಂಸದರೂ, ಶಾಸಕರು ಹಾಗೂ ಅಧಿಕಾರಿಗಳು ಸೇರಿ ಸುಮಾರು 450 ಜನರಿಗೆ ಆಸನ ವ್ಯವಸ್ಥೆಯನ್ನ ಮಾಡಬೇಕಾಗಿರುತ್ತದೆ. ಬೆಂಗಳೂರು ವಿಶ್ವದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿ ಸಿಲಿಕಾನ್ ಸಿಟಿ, ಐಟಿ ಹಬ್, ಉದ್ಯಾನನಗರಿ ಎಂಬ ಖ್ಯಾತಿ ಹೊಂದಿದ ನಗರವಾಗಿದ್ದು, ಇಡೀ ವಿಶ್ವವನ್ನೇ ತನ್ನತ್ತ ಆಕರ್ಷಿಸುವ ಕಾಸ್ಕೋ ಪಾಲಿಟನ್ ನಗರವೆಂದು ಹೆಗ್ಗಳಿಕೆ ಹೊಂದಿರುವ ಈ ನಗರಕ್ಕೆ ಪಾಲಿಕೆಯು ಕಳಶ ಇದ್ದ ಹಾಗೆ.

ಪಾಲಿಕೆಯು ಅತ್ಯಂತ ಮಹತ್ವವಾದ ಪಾತ್ರವಹಿಸಬೇಕಾಗಿರುತ್ತದೆ. ಪಾಲಕೆಯ ಸಭಾಂಗಣ ಅತ್ಯಂತ ಕಿರಿಯದಾಗಿದ್ದು ಅದನ್ನು ರೀ ಮಾಡಲಿಂಗ್ ಮಾಡಿದರು ಸಹ ಬೆಂಗಳೂರಿಗೆ ತಕ್ಕಂತೆ ಪಾಲಿಕೆ ಸಭಾಂಗಣ ಹಾಗೂ ಸ್ಥಾಯಿ ಸಮಿತಿಯ ಕೊಠಡಿಗಳನ್ನು ವಿಸ್ತರಿಸುವಲ್ಲಿ ವಿಶಿಷ್ಠ ಮತ್ತು ವಿಶಾಲವಾದ ಹಾಗೂ ಉತ್ತಮ ದರ್ಜೆಯ ರೀತಿಯಲ್ಲಿ ವಿನ್ಯಾಸಗೊಳಿಸಿ, ಡಿಜಿಟಲೀಕರಣ ಹೊಂದಿದ ಪ್ರತ್ಯೇಕ ಆಸನ, ಧ್ವನಿವರ್ಧಕ ಮತ್ತು ಆಸನಗಳ ನಡುವಿನ ಅಂತರವನ್ನು ಗಮನದಲ್ಲಿರಿಸಿ ಕಾರ್ಯಯೋಜನೆಯನ್ನು ರೂಪಿಸಿಬೇಕಾಗುತ್ತದೆ.

2021 2022ರ ಆಯವ್ಯಯದಲ್ಲಿ ಮೀಸಲಿಟ್ಟ ಅನುದಾನದಲ್ಲಿ ಯೋಜನೆ ಅನುಷ್ಠಾನಗೊಳಿಸಿದಲ್ಲಿ ಅದು ಉಪಯೋಗವಾಗದೆ ನಷ್ಠವಾದಂತೆ ಆಗುತ್ತದೆ ಹಾಗೂ ಈ ಸಂಬಂಧ ಮಾಜಿ ಮಹಾಪೌರರು ಹಾಗೂ ರಾಜಕೀಯ ಪಕ್ಷದ ಪ್ರಮುಖ ನಾಯಕರ ಸಲಹೆ ಪಡೆದು ಕಾಮಗಾರಿ ಕೈಗೊಳ್ಳಲು ಕ್ರಮವಹಿಸಿ ಹಾಲಿ ಟೆಂಡರ್‌ ಕರೆದಿದ್ದ. ತಡೆ ನೀಡಿ ಡಿಜಿಟಲೀಕರಣ ಉತ್ಕೃಷ್ಟ ದರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳುವ ಮೂಲಕ ಈಗ ನಿಗದಿಪಡಿಸಿರುವ ಅನುದಾನ ಅವೈಜ್ಞಾನಿಕವಾಗಿ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಲು ಕೋರಿದೆ.

Edited By :
Kshetra Samachara

Kshetra Samachara

09/05/2022 10:32 pm

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ