ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೈಸೂರು ರಸ್ತೆ, ವೃಷಭಾವತಿ ರಾಜಕಾಲುವೆ ದುರಸ್ತಿ ಕಾಮಗಾರಿ ತಪಾಸಣೆ ನಡೆಸಿದ ಮುಖ್ಯ ಆಯುಕ್ತರು

ಬೆಂಗಳೂರು: ಬೆಂಗಳೂರು-ನಗರದ ಮೈಸೂರು ರಸ್ತೆ ಕೆಂಗೇರಿ ಬಿಡಿಎ ಅಪಾರ್ಟ್ಮೆಂಟ್ ಬಳಿ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಈ ವೇಳೆ ದುರಸ್ತಿ ಕಾಮಗಾರಿಯ ಪರಿಶೀಲನೆ ನಡೆಸಿ, ಮುಂದಿನ‌ 45 ದಿನದೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಗರದ ಮೈಸೂರು ರಸ್ತೆ ಕೆಂಗೇರಿ ಬಳಿಯ ರಾಜಕಾಲುವೆ ದುರಸ್ತಿ ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಸಂಬಂಧ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ‌ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ದುಬಾಸಿಪಾಳ್ಯ ಕಡೆಯಿಂದ ಬರುವ ಮಳೆ ನೀರು ಮೈಸೂರು ರಸ್ತೆಯ ಕೆಳಭಾಗದ ಸೇತುವೆಯ ಮೂಲಕ ವೃಷಭಾವತಿ ರಾಜಕಾಲುವೆಗೆ ಹಾದುಹೋಗಲಿದೆ. ರಸ್ತೆ ಅಡ್ಡಲಾಗಿ ಒಂದೇ ಪೈಪ್ ಕಲ್ವರ್ಟ್ ಇದ್ದ ಪರಿಣಾಮ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ವೃಷಭಾವತಿ ನದಿಯ ತಡೆಗೋಡೆ, ಸೇತುವೆಯ ಬಾಕ್ಸ್ ಕಲ್ವರ್ಟ್, ರಸ್ತೆ ಎತ್ತರಿಸುವ ಕಾಮಗಾರಿ ಸೇರಿದಂತೆ ಸುಮಾರು 9.1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ವೃಷಭಾವತಿ ರಾಜಕಾಲುವೆಗೆ 240 ಮೀಟರ್ ತಡೆಗೋಡೆ ನಿರ್ಮಾಣ, ರಸ್ತೆಯಲ್ಲಿ ನೀರು ನಿಲ್ಲದಂತೆ ಕೆಂಗೇರಿ ಕಡೆ ಹೋಗುವ 200 ಮೀಟರ್ ರಸ್ತೆ ಎತ್ತರಿಸುವ ಕಾಮಗಾರಿ ಹಾಗೂ ದುಬಾಸಿ ಪಾಳ್ಯದಿಂದ ಬರುವ ನೀರು ಸರಾಗವಾಗಿ ನದಿಗೆ ಸೇರಲು 6 ಮೀಟರ್ ಅಗಲದ ಸೇತುವೆಯ ಬಾಕ್ಸ್ ಕಲ್ವರ್ಟ್ ಕಾಮಗಾರಿಯು ಅರ್ಧ ಪೂರ್ಣಗೊಂಡಿದೆ. ಅರ್ಧ ಭಾಗ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಆ ಭಾಗದಲ್ಲಿ(ಕೆಂಗೇರಿ ಕಡೆ ಹೋಗುವ ರಸ್ತೆ) ಅವಕಾಶ ಕಲ್ಪಿಸಿ ಇನ್ನೊಂದು ಭಾಗದಲ್ಲಿ ಸೇತುವೆ ನರ್ಮಾಣ ಕಾರ್ಯ ಆರಂಭವಾಗಬೇಕಿದೆ. ಈ ಪೈಕಿ ಇನ್ನು ಅರ್ಧ ಭಾಗದ ರಸ್ತೆ(ನಗರದೊಳಗೆ ಬರುವ ರಸ್ತೆ)ಯಲ್ಲಿ ಕಾಮಗಾರಿ ಕೈಗೊಳ್ಳಲು ಸಂಚಾರಿ ಪೊಲೀಸರಿಂದ ಅನುಮತಿ ಪಡೆಯಲಾಗಿದ್ದು, ಮಾರ್ಗ ಬದಲಾವಣೆ ಮಾಡಿ ಮುಂದಿನ ವಾರದಿಂದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

Edited By : Vijay Kumar
Kshetra Samachara

Kshetra Samachara

23/04/2022 06:41 pm

Cinque Terre

1.24 K

Cinque Terre

1

ಸಂಬಂಧಿತ ಸುದ್ದಿ