ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಗಾಲ ಶುರುವಾಗಿದೆ, ಮೊದಲು ರಸ್ತೆ ಗುಂಡಿ ಮುಚ್ಚಿ; ಪಾಲಿಕೆಗೆ ಕೋರ್ಟ್ ಖಡಕ್ ಸೂಚನೆ

ಮಳೆಗಾಲ ಆರಂಭವಾಗಿದೆ. ರಸ್ತೆ ಗುಂಡಿಗಳನ್ನು ಮೊದಲು ಮುಚ್ಚಿ....ಹೀಗಂತ ಜನ ಹೇಳಿದ್ದಲ್ಲ. ಬದಲಿಗೆ ಕೋರ್ಟ್ ಬಿಬಿಎಂಪಿಗೆ ಖಡಕ್ ಸೂಚನೆ ನೀಡಿದೆ.

ಹೌದು.. ಈಗಾಗಲೇ ಮುಂಗಾರ ಮಳೆ ಆರಂಭವಾಗಿದೆ. ನಗರದಲ್ಲಿ ರಸ್ತೆ ಗುಂಡಿಗಳು ಹೆಚ್ಚುತ್ತಲ್ಲೇ ಇದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ ಕೋರ್ಟ್ ಸೂಚನೆ ನೀಡಿದೆ. ನಗರದ ರಸ್ತೆ ಗುಂಡಿ ಮುಚ್ಚುವಂತೆ ನಿರ್ದೇಶನ ಕೋರಿ ಕೋರಮಂಗಲದ ವಾಸಿ ವಿಜಯ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಿನ್ನೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಪೀಠ ನಡೆಸಿತು. ಆ ಸಂದರ್ಭದಲ್ಲಿ ಮೊದಲು ರಸ್ತೆ ಗುಂಡಿ ಮುಚ್ಚಿ. ನಿಮ್ಮ ಸಮಸ್ಯೆಗಳನ್ನು ಹೊತ್ತು ತಂದು ಕೋರ್ಟ್ ಮುಂದೆ ಬರಬೇಡಿ ಎಂದು ಕಾಮಗಾರಿ ಪಡೆದ ಅಮೇರಿಕನ್‌ ರೋಡ್ ಟೆಕ್ನಾಲಜೀಸ್ ಸಂಸ್ಥೆ ಹಾಗೂ ಬಿಬಿಎಂಪಿಗೆ ತಾಕೀತು ಮಾಡಿದೆ.

ಇನ್ನೂ ಎಆರ್ ಟಿಸಿ ಸಂಸ್ಥೆಯ ಮೇಲೆ ಹಲ್ಲೆ ನಡೆಸಿದ ಆರೋಪ‌ದ‌ ಮೇಲೆ ಚೀಫ್ ಎಂಜಿನಿಯರ್ ಪ್ರಹ್ಲಾದ್ ರವರನ್ನು ಬದಲಾವಣೆ ಮಾಡಲಾಗಿದೆ. ಸಂಸ್ಥೆಯ ಸದಸ್ಯರೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ತನಿಖೆ ನಡೆಯುತ್ತಿದೆ.

ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By :
PublicNext

PublicNext

07/06/2022 01:00 pm

Cinque Terre

26.66 K

Cinque Terre

0

ಸಂಬಂಧಿತ ಸುದ್ದಿ