ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಾರ್ಡನ್ ಸಿಟಿಯಲ್ಲಿ ಹಣ್ಣಿನ ರಾಜ ಮಾವು, ಹಲಸು ಮೇಳ ಆರಂಭ

ಬೆಂಗಳೂರು: ಹಣ್ಣಿನ ರಾಜ ಮಾವು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಣ್ಣಿನ ಸಿಕರಣೆ, ಜ್ಯೂಸ್‌ಗೆ ಮಾವಿನ ಹಣ್ಣು ಬಳಸಲಾಗುತ್ತದೆ. ಇದೀಗ ಸೀಸನ್ ಕೂಡ ಮತ್ತಷ್ಟು ಸಿಹಿಯಾದ ಹಣ್ಣು‌ ಮಾರ್ಕೆಟ್‌ಗೆ ಬಂದಿದೆ. ಆದರೆ ಕೆಮಿಕಲ್ ಮಿಶ್ರಿತ ಹಣ್ಣು ದೊರೆಯುವ ಭಯ‌ ಕೂಡ ಗ್ರಾಹಕರಿಗೆ ಇದೆ. ಹಾಗಿದ್ರೆ ನೀವೂ ಹಾಪ್‌ ಕಾಮ್ಸ್‌ಗೆ ಬನ್ನಿ..

ಬಾದಾಮಿ, ಮಲ್ಲಿಕಾ, ರಸಪುರಿ, ಬೈಗಂಪಲ್ಲಿ, ಸೇಂದೂರು, ತೋತಾಪುರಿ, ದಶಹರಿ, ಮಲಗೋವಾ, ಹೀಮಾಮ್ ಪಸಂದ್, ಕಾಲ್ ಪಾಡ್, ಕೇಸರ್ ಹೀಗೆ ನಾನಾ ಬಗೆಯ ಮಾವಿನ ಹಣ್ಣು ಇದೀಗ ಹಾಪ್ ಕಾಮ್ಸ್‌ನಲ್ಲಿ ದೊರೆಯಲಿದೆ.

ಹೌದು. ನಗರದಲ್ಲಿರುವ 200ಕ್ಕೂ ಹೆಚ್ಚು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ನಿನ್ನೆಯಿಂದ ಮಾವು ಮತ್ತು ಹಲಸು ಮೇಳ ಪ್ರಾರಂಭವಾಗಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಲಾಲ್‌ಬಾಗ್‌ ಮತ್ತು ನಗರದ ಕೆಲ ಆಯ್ದ ಸ್ಥಳಗಳಲ್ಲಿ ಮಾವು ಮೇಳ ನಡೆಯುತ್ತಿದೆ.

ಮಾವು ತಡವಾಗಿ ಮಾರುಕಟ್ಟೆಗೆ ಬರುತ್ತಿದ್ದರೂ ಗ್ರಾಹಕರಿಗೆ ಯಥೇಚ್ಛವಾಗಿ ಖರೀದಿಸಲು ಮೇಳಗಳು ಉತ್ತಮ ಅವಕಾಶ ಕಲ್ಪಿಸಲಿವೆ. ಎರಡು ವರ್ಷಗಳಿಂದ ಮಾವು ಮೇಳವನ್ನು ಸ್ಥಗಿತಗೊಳಿಸಲಾಗಿತ್ತು. ಲಾಲ್‌ಬಾಗ್‌ನಲ್ಲಿ ಈ ಬಾರಿ 100 ಮಳಿಗೆಗಳನ್ನು ತೆರೆಯಲಾಗಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ನಾನಾ ಭಾಗಗಳ ರೈತರಿಗೆ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಜನರಲ್ ಮ್ಯಾನೇಜರ್ ಜಯಪ್ರಕಾಶ್ ತಿಳಿಸಿದರು.

ಇನ್ನೂ ಮಾವು ಮೇಳದ ಜತೆಗೆ ಹಲಸಿನ ಮೇಳ ಕೂಡಾ ನಡೆಯುತ್ತಿದೆ. ಚಂದ್ರ ಹಲಸು, ರುದ್ರಾಕ್ಷಿ ಹಲಸು ಸೇರಿದಂತೆ 12 ಜಾತಿಯ ಹಲಸು, ಮಾವು ಮೇಳದಲ್ಲಿ ದೊರೆಯಲಿದೆ. ಗ್ರಾಹಕರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದು, ಹಣ್ಣುಗಳನ್ನು ಕಂಡು ಖುಷಿ ಪಟ್ಟರು.

ಇದೇ ವೇಳೆ ಒಂದು ತಿಂಗಳ ಕಾಲ ಮೇಳ ಹಾಪ್ ಕಾಮ್ಸ್‌ನಲ್ಲಿ ಜರುಗಲಿದೆ. 500 ಟನ್ ಮಾವುಗಳನ್ನು ಮಾರಾಟ ಮಾಡುವ ನಿರೀಕ್ಷೆ ಹಾಪ್ ಕಾಮ್ಸ್ ನವರು ಹೊಂದಿದ್ದಾರೆ.

ಗಣೇಶ್ ಹೆಗಡೆ ಪಬ್ಲಿಕ್ ‌ನೆಕ್ಷ್ಟ್ ಬೆಂಗಳೂರು

Edited By :
PublicNext

PublicNext

24/05/2022 09:46 pm

Cinque Terre

45.69 K

Cinque Terre

0

ಸಂಬಂಧಿತ ಸುದ್ದಿ