ವರದಿ- ಬಲರಾಮ್ ವಿ
ಬೆಂಗಳೂರು: ಆತ ಕಳೆದ ಇಪ್ಪತ್ತು ವರ್ಷಗಳಿಂದ ಬಾಡಿಗೆ ಆಟೋ ಓಡಿಸಿಕೊಂಡು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ. ಆದ್ರೆ ಏಕಾಏಕಿ ಆಟೋ ಚಾಲನೆಯ ಸಮಯದಲ್ಲಿ ಬೆನ್ನು ಮೂಳೆ ಮುರಿತದಿಂದಾಗಿ ಕುಟುಂಬದ ಜೀವನ ನಿರ್ವಹಣೆ ಸಂಕಷ್ಟಕ್ಕೆ ದೂರುವಂತಾಗಿದೆ.
ಈತನ ಹೆಸರು ಮಹಮ್ಮದ್ ರಫೀಕ್. ಬೆಂಗಳೂರಿನ ಹೆಬ್ಬಾಳದ ಮೂಲದ ರಫೀಕ್ ಕಳೆದ ಇಪ್ಪತ್ತು ವರ್ಷಗಳಿಂದ ಬಾಡಿಗೆ ಆಟೋ ಓಡಿಸಿಕೊಂಡು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ. ಲಿವರ್ ಮೂಲಕ ಗಾಡಿಯನ್ನು ಸ್ಟಾರ್ಟ್ ಮಾಡುವಾಗ ಬೆನ್ನು ಮೂಳೆ ಮುರಿದಿದೆ. ನಾಟಿ ವೈದ್ಯ ಹಾಗೂ ಕೆಆರ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೂ ಪ್ರಯೋಜನವಾಗಿಲ್ಲ. ಕೆ.ಆರ್ ಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೋರಿಂಗ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ..
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರಫೀಕ್‌ನ ಬೆನ್ನು ಮೂಳೆ ಮುರಿತಿದಿಂದಾಗಿ ದೇಹದ ಅಂಗಗಳು ಕಾರ್ಯನಿರ್ವಹಿಸುತ್ತಿಲ್ಲ. ಪ್ರಸ್ತುತ ಈ ಕುಟುಂಬವು ಕೆ.ಆರ್ ಪುರದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಕುಟುಂಬದ ಜೀವನಕ್ಕೆ ಸಿಡಿಲು ಬಡಿದಂತಾಗಿದೆ. ಪತ್ನಿ ಹಾಗೂ ಮಕ್ಕಳು ತಮಗೆ ಸಹಾಯ ಮಾಡುವಂತೆ ಅಂಗಲಾಚಿದ್ದಾರೆ.
ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಮನುಷ್ಯತ್ವ ಮೆರೆಯಲು ಇಂತಹ ಘಟನೆಗಳು ಸಾಕ್ಷಿಯಾಗಲಿವೆ.
NAME: NASEEMA
Bank: Canara Bank
Account NO: 2615119000342
IFSC, CNRB000261
Branch: Vidyaranyapura
UPI, 9916874434
PublicNext
19/08/2022 09:39 am