ಬೆಂಗಳೂರು: ಕೆ.ಸಿ ಜನರಲ್ ಆಸ್ಪತ್ರೆಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹಾಗೂ ಜಸ್ಟಿಸ್ ಬಿ.ವೀರಪ್ಪ ನೇತೃತ್ವದ ನಿಯೋಗ ದಿಢೀರ್ ಭೇಟಿ ನೀಡಿದೆ.
ಮಲ್ಲೇಶ್ವರಂನಲ್ಲಿ ಇರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ವೈದ್ಯರ ಅಲಭ್ಯತೆ, ಔಷಧಗಳ ಕೊರತೆ, ಶುಚಿತ್ವದ ಕುರಿತು ನಿರಂತರವಾಗಿ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿರುವ ಲೋಕಾಯುಕ್ತ ನ್ಯಾಯಮೂರ್ತಿ ನೇತೃತ್ವದ ನಿಯೋಗ ಪರಿಶೀಲನೆ ನಡೆಸಿ ರೋಗಿಗಳ ಅಹವಾಲು ಆಲಿಸಿದೆ.
ಆಸ್ಪತ್ರೆಗೆ ಕಳೆದ ತಿಂಗಳು ತಮ್ಮ ಮಗಳನ್ನ ಹೆರಿಗೆಗೆ ಅಂತಾ ಕರೆತಂದಾಗ ವಾರ್ಡ್‌ನ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ತಾಯಿ ಕಾರ್ಡ್‌ಅನ್ನೆ ಕಿತ್ತಿಟ್ಟುಕೊಂಡು 500 ರೂಪಾಯಿ ಕೇಳಿದರು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ಮಂಜುಳಾ ಎಂಬಾಕೆ ದೂರಿದ್ದಾರೆ.
ಅಲ್ಲದೇ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದಿರುವುದರಿಂದ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ. ಆಸ್ಪತ್ರೆಯಲ್ಲಿ ಸರಿಯಾಗಿ ಶುಚಿತ್ವ ಕಾಪಾಡುತ್ತಿಲ್ಲ. ಔಷಧಿಗಳ ಕೊರತೆಯಿದೆ. ವ್ಹೀಲ್ ಚೇರ್ ಕೂಡ ರೋಗಿಗಳಿಗೆ ಸರಿಯಾಗಿ ಸಿಗುವುದಿಲ್ಲ ಎಂದು ರೋಗಿಗಳು ದೂರು ನೀಡಿದ್ದಾರೆ.
PublicNext
29/11/2024 03:28 pm