ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸುವ ವೇಳೆ ಮಹಿಳಾ ಪ್ರಯಾಣಿಕರೊಬ್ಬರುವ ಉಪಹಾರಕ್ಕೆಂದು ಚಿಕನ್ ಸ್ಯಾಂಡ್ವಿಚ್ ತೆಗೆದುಕೊಂಡಿದ್ದು, ತಿನ್ನುವ ವೇಳೆ ಚಿಕನ್‌ನಲ್ಲಿ ಸತ್ತ ಹುಳು ಪತ್ತೆಯಾಗಿದೆ. ಘಟನೆ ಸಂಬಂಧಿಸಿದಂತೆ ಸಬ್ ವೇ ಔಟ್ ಲೇಟ್ ಮುಚ್ಚಲಾಗಿದೆ.
ಹಣಕಾಸು ಸಂಸ್ಥೆಯ ಮುಖ್ಯಸ್ಥೆಯಾಗಿರುವ ಅನನ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಭಾಗವಹಿಸಲು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು. ಆನಂತರ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ಕ್ಕೆ ಬಂದಿದ್ದಾರೆ. ಈ ವೇಳೆ ಸಬ್ ವೇ ನ ಔಟ್ ಲೆಟ್‌ನಲ್ಲಿ ಉಪಹಾರವಾಗಿ ಸ್ಯಾಂಡ್ವಿಚ್ ತೆಗೆದು ಕೊಂಡಿದ್ದಾರೆ. ತಿನ್ನುವ ಸಮಯದಲ್ಲಿ ಚಿಕನ್‌ನಲ್ಲಿ ಸತ್ತ ಹುಳು ಪತ್ತೆಯಾಗಿದೆ.
ತಮ್ಮಗಾದ ಅನುವಭವನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಸ್ಯಾಂಡ್‌ವಿಚ್ ತಿಂದ ನಂತರ ಇಡೀ ದಿನ ಅಸಹ್ಯಕರವಾದ ಅನುಭವ ಅನುಭವಿಸಿದೆ. ಹುಳುವನ್ನ ತಿಂದು ಬಿಟ್ಟೆನಾ? ಇದರಿಂದ ಪುಡ್ ಪಾಯ್ಸನಿಂಗ್ ಆಗುತ್ತಾ ಎಂಬ ಆತಂಕ ಸಹ ನನ್ನನ್ನು ಕಾಡಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅನನ್ಯ ಅವರ ಎಕ್ಸ್ ಖಾತೆಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಕಳೆದ ಶುಕ್ರವಾರ ಸಬ್ ವೇ ಮ್ಯಾನೇಜರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸಲಿ ಸತ್ಯವನ್ನ ಪತ್ತೆ ಮಾಡುವ ಕಾರಣಕ್ಕೆ ಶುಕ್ರವಾರದಿಂದ ಸಬ್ ವೇ ಔಟ್ ಲೆಟ್ ಮುಚ್ಚಿರುವುದಾಗಿ ಹೇಳಿದ್ದಾರೆ.
Kshetra Samachara
01/12/2024 07:33 pm