ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದು ವಿಶ್ವ ಸ್ತನ್ಯಪಾನ ದಿನಾಚರಣೆ; ತಾಯಂದಿರ ಅರಿವಿಗೆ ವೇದಿಕೆ

ವರದಿ: ಗೀತಾಂಜಲಿ

ಇಂದು ವಿಶ್ವ ಸ್ತನ್ಯಪಾನ ದಿನವನ್ನು ಆಚರಿಸಲಾಗುತ್ತಿದೆ. ಎದೆ ಹಾಲಿನ ಮಹತ್ವ ಏನು ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಸ್ತನ್ಯಪಾನದ ಮಹತ್ವದ ಜೊತೆಗೆ "ಹ್ಯೂಮನ್ ಮಿಲ್ಕ್ ಬ್ಯಾಂಕ್" ಮತ್ತು ಮಿಲ್ಕ್ ಬ್ಯಾಂಕ್ ಗೆ ಹಾಲು ದಾನ‌ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಆಸ್ಪತ್ರೆ ಮುಂದಾಗಿದೆ.

ಕಳೆದ 5 ವರ್ಷದಿಂದ ಮಿಲ್ಕ್ ಬ್ಯಾಂಕ್ ನಲ್ಲಿ ಹಾಲನ್ನು ಶೇಖರಿಸಿ ಅಗತ್ಯ ಇರುವವರಿಗೆ ನೀಡಲಾಗುತ್ತಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ "ಹ್ಯೂಮನ್ ಮಿಲ್ಕ್ ಬ್ಯಾಂಕ್ " ಸಹ ಇದೆ. ಇಲ್ಲಿ ತಾಯಿಯ ಎದೆಹಾಲನ್ನು ಸಂಗ್ರಹಿಸಿ ಒಂದು ದಿನ ಫ್ರಿಜ್ ನಲ್ಲಿ ಇರಿಸಿ ನಂತರ ಅದನ್ನು ಪರೀಕ್ಷೆಗೆ ಕಳುಹಿಸಿ ಇದು ಮಗುವಿಗೆ ನೀಡಲು ಯೋಗ್ಯ ಎಂದು ಪರೀಕ್ಷಾ ವರದಿ‌ ಬಂದ ನಂತರ ಅಗತ್ಯವಿರುವ ಶಿಶುವಿಗೆ ನೀಡಲಾಗುತ್ತದೆ. ಅಲ್ಲದೆ, ಬೇರೆ ಆಸ್ಪತ್ರೆಯಲ್ಲಿ ಇರುವಂತಹ ತಾಯಂದಿರು ಕೂಡ ಮಿಲ್ಕ್ ಬ್ಯಾಂಕ್ ಗೆ ಹಾಲನ್ನು ದಾನ ಮಾಡಲು ಆಸ್ಪತ್ರೆ ಅವಕಾಶ ನೀಡುತ್ತಿದೆ.

ಒಮ್ಮೆ ಸಂಗ್ರಹಿಸಿದ ಹಾಲನ್ನು 6- 8 ತಿಂಗಳ ಕಾಲ ಉಪಯೋಗಿಸಲು ಅವಕಾಶವಿದೆ. ಮಗು ಹುಟ್ಟಿದ ಮೊದಲ 7 ದಿನಗಳು ತಾಯಿಯ ಹಾಲು ಅತ್ಯಂತ ಮಹತ್ವದ್ದು. ಈ ಅವಧಿಯ ಹಾಲನ್ನು ಗೋಲ್ಡನ್ ಮಿಲ್ಕ್ ಎನ್ನಲಾಗುತ್ತದೆ. ಈ ಸಮಯದಲ್ಲಿ ತಾಯಿಯು ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ ಹೀಗೆ ಬ್ಯಾಂಕ್ ನಲ್ಲಿ ಸಂಗ್ರಹಿಸಿದ ಹಾಲನ್ನು ಆ ಮಗುವಿಗೆ ನೀಡಲಾಗುತ್ತದೆ.

Edited By : Shivu K
Kshetra Samachara

Kshetra Samachara

01/08/2022 10:39 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ