ಬೆಂಗಳೂರು: ಸರ್ಕಾರ ಜನರಿಗೆ ಕಾಲಕಾಲಕ್ಕೆ ಅನೇಕ ಸೌಲಭ್ಯ ಒದಗಿಸುತ್ತಿದೆ. ಅಧಿಕಾರಿಗಳು ಆಯಾ ಭಾಗದ ಜನರಿಗೆ ಸೇವೆಯನ್ನು ತಲುಪಿಸುವ ಕೆಲಸ ಮಾಡಬೇಕು. ಆದರೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮ ಪಂಚಾಯ್ತಿ ಪಿಡಿಒ ನರ್ಮದಾ ಅವರ ಬೇಜವಾಬ್ದಾರಿಯಿಂದ 'ವೈದ್ಯರ ನಡೆ ಹಳ್ಳಿಕಡೆ' ಕಾರ್ಯಕ್ರಮ ಸಂಪೂರ್ಣ ವಿಫಲವಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮತ್ತು ಸದಸ್ಯರ ಗಮನಕ್ಕೆ ತಾರದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಆರೋಗ್ಯ ಶಿಬಿರ ಕಾರ್ಯಕ್ರಮಕ್ಕೆ ಜನರೇ ಬಂದಿಲ್ಲ. ಹೀಗಾಗಿ ವೈದ್ಯರು ಜನರಿಲ್ಲದೇ ನೊಣ ಹೊಡೆಯುತ್ತಿದ್ದಾರೆ.
ಈ ಬಗ್ಗೆ ಬೂದಿಗೆರೆ ಗ್ರಾಮ ಪಂಚಾಯತಿ ಪಿ.ಡಿ.ಓ ನರ್ಮದಾರನ್ನು ಪ್ರಶ್ನಿಸಿದಾಗ ಈ ಕಾರ್ಯಕ್ರಮದ ಬಗ್ಗೆ ಎಲ್ಲ ಸದಸ್ಯರಿಗೂ ತಿಳಿಸಿದ್ದೇವೆ. ಕರಪತ್ರ ಹಾಗೂ ಆಟೋ ಪ್ರಚಾರ ಮಾಡಿದ್ದೇವೆ. ಇಂದು ಮೊದಲ ಶ್ರಾವಣ ಶನಿವಾರವಾದ್ದರಿಂದ ಜನರು ದೇವಾಲಯಕ್ಕೆ ಹೋಗಿದ್ದಾರೆ. ಎಂಬ ಹಾರಿಕೆ ಉತ್ತರ ನೀಡ್ತಾರೆ.
ಅಧ್ಯಕ್ಷರು, ಸದಸ್ಯರು ನಡೆ ಒಂದು ಕಡೆಯಾದರೆ, PDO ನಡೆ ಮತ್ತೊಂದು ಕಡೆ. ಹೀಗಾದರೆ ಯಾವುದೇ ಪಂಚಾಯ್ತಿಯ ಅಭಿವೃದ್ಧಿ ಅಸಾಧ್ಯ. ಎತ್ತು ಏರಿಗೆ ಕೋಣ ನೀರಿಗೆ ಎಳೆದರೆ ಯಾವುದೇ ಅಭಿವೃದ್ಧಿ ಅಸಾಧ್ಯ. ತಪ್ಪಿತಸ್ಥರ ವಿರುದ್ಧ ಹಿರಿಯ ಅಧಿಕಾರಿಗಳು ಗಮನ ಹರಿಸಿ ತಪ್ಪನ್ನ ಸರಿಪಡಿಸಬೇಕಿದೆ. ಇಲ್ಲವಾದರೆ ಸರ್ಕಾರದ ದುಡ್ಡು ಮಣ್ಣುಪಾಲಾಗ್ತದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
30/07/2022 06:55 pm