ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 30 ವರ್ಷದೊಳಗಿನ ಯುವಕರಲ್ಲಿ ಹೆಚ್ಚಾಗುತ್ತಿದೆ ಹಾರ್ಟ್ ಅಟ್ಯಾಕ್

ವರದಿ- ಗೀತಾಂಜಲಿ

ಬೆಂಗಳೂರು: ಆಧುನಿಕ ಜೀವನ ಶೈಲಿಯಿಂದ ಯುವಕರು ಇನ್ನಿಲ್ಲದ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ವಯೋಮಿತಿ ಇಲ್ಲದೇ ಎಷ್ಟೋ ಜನರು ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಆದರಲ್ಲೂ 30ರ ವಯಸ್ಸಿನ ಯುವಕರಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುತ್ತಿದೆ.

ಬಿಡುವಿಲ್ಲದ ಬೆಂಗಳೂರಿನ ಜೀವನ ಶೈಲಿಯಿಂದ ಎಷ್ಟೋ ಜನರು ಅತೀಯಾದ ಒತ್ತಡಕ್ಕೆ ಒಳಗಾಗ್ತಿದ್ದಾರೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಹೃದಯ ಸಂಬಂಧಿ ಕಾಯಿಲೆ ಉಲ್ಬಣಿಸುತ್ತಿತ್ತು. ಆದ್ರೆ ಈಗ ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಹೃದಯ ಖಾಯಿಲೆ ಉಲ್ಬಣಿಸುತ್ತಿದೆ. ಆದರಲ್ಲೂ ಹದಿಹರೆಯಾದ ಯುವಕರು ಹೃದಯ ಕಾಯಿಲೆಗೆ ಒಳಗಾಗ್ತಿದ್ದಾರೆ. ಅತೀ ಬೇಗ ಯಶಸ್ಸುಗಳಿಸಬೇಕೆಂದು ಆತಂಕಕ್ಕೆ ಒಳಗಾಗ್ತಿರುವುದರಿಂದ, ನಿದ್ರಾಹೀನತೆಯಿಂದ , ಧೂಮಪಾನ ಮತ್ತು ಡ್ರಗ್ಸ್ ಸೇವನೆಯಿಂದಲ್ಲೂ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದೆ. ದಿನದಿಂದ ದಿನಕ್ಕೆ ಹೃದಯ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗ್ತಿದೆ.

ಹೃದಯ ಕಾಯಿಲೆಯ ಮುನ್ಸೂಚನೆ

- ಎದೆನೋವು

- ಅನಿಯಮಿತ ಹೃದಯ ಬಡಿತ

- ಉಸಿರಾಟದ ತೊಂದರೆ

- ಲಘು ತಲೆನೋವು

- ಪ್ರಜ್ಞಾ ಹೀನತೆ

ಹೃದಯದ ಆರೋಗ್ಯಕ್ಕೆ ವೈದ್ಯರ ಸಲಹೆ

- ಬಿಪಿ ಕಡಿಮೆ ಮಾಡಿಕೊಳ್ಳಬೇಕು

- ರಕ್ತದಲ್ಲಿ ಸಕ್ಕರೆ ತಗ್ಗಿಸಬೇಕು

- ಸೋಂಟದಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು

- ತೂಕ ಹೆಚ್ಚಾಗದಂತೆ ಮುತುವರ್ಜಿವಹಿಸಬೇಕು

- ಅತಿಯಾದ ಆಸೆ ಇಟ್ಟುಕೊಳ್ಳಬಾರದು

ಬೆಂಗಳೂರಿನಂತಹ ನಗರದಲ್ಲಿ ಜನರು ಆರೋಗ್ಯದ ಕಡೆ ಗಮನಹರಿಸುವದಕ್ಕಿಂತ ದುಡಿಯುವುದರ ಕಡೆನೇ ಹೆಚ್ಚು ಒಲವು ತೋರುತ್ತಾರೆ. ಸರಿಯಾಗಿ ಊಟ ಮಾಡದೇ , ನಿದ್ದೆ ಮಾಡದೇ ನಿರ್ಲಕ್ಷ್ಯವಹಿಸುವುದು. ಫಾಸ್ಟ್ ಫುಡ್ ಸೇವನೆ ಅತೀಯಾಗಿ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್ ಸಂಭವಿಸುತ್ತೆ.ಹಾಗಾಗಿ ರೋಗ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನ ಸಂಪರ್ಕಿಸುವುದು ಅವಶ್ಯಕ. ಹಾಗೆ ಸೂಕ್ತ ಚಿಕಿತ್ಸೆಯನ್ನ ಪಡೆಯಬೇಕು. ಇಲ್ಲವಾದಲ್ಲಿ ಅದು ಬೇರೆ ಸ್ವರೂಪವೇ ಪಡೆಯುತ್ತೆ. ಹಾಗಾಗಿ ಆದಷ್ಟು ಎಚ್ಚರವಹಿಸಿ. ನಿರ್ಲಕ್ಷಿಸದಿರಿ.

Edited By :
PublicNext

PublicNext

20/07/2022 11:54 am

Cinque Terre

23.54 K

Cinque Terre

1

ಸಂಬಂಧಿತ ಸುದ್ದಿ