ಬೆಂಗಳೂರು: ಇಂದು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ. ಹೀಗಾಗಿ ಸರ್ಕಾರಿ ಉದ್ಯೋಗಿಗಳಿಗೆ ಈ ದಿನ ರಜೆ ಘೋಷಿಸಲಾಗಿರುತ್ತದೆ. ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರಜೆ ಇರುವುದಿಲ್ಲ. ಅದರಲ್ಲೂ ಗುರುವಾರದ ದಿನ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಅತೀ ಹೆಚ್ಚಿನ ಕಾರ್ಯ ಇರುತ್ತದೆ. ಯಾಕೆಂದರೆ ಗುರುವಾರ ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿರಕ್ಷಣಾ ಲಸಿಕೆ ನೀಡಲಾಗುವ ದಿನ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಾರ್ಡ್ ನಂಬರ್ 176 ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಪುಟ್ಟ ಮಕ್ಕಳು ತಮ್ಮ ಪೋಷಕರೊಂದಿಗೆ ಬಂದಿದ್ದರು. ಆದರೆ ಯಾವುದೇ ಸೂಚನೆ ನೀಡಿದೆ ಅಲ್ಲಿನ ಸಿಬ್ಬಂದಿ ಇಡೀ ದಿನ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದರು. ಇದರಿಂದ ಬಹಳ ಹೊತ್ತು ಕಾದಿದ್ದ ಮಕ್ಕಳು ಮತ್ತು ಅವರ ಪೋಷಕರು ತೊಂದರೆ ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೇ ಹಲವರು ತಮ್ಮ ಪಕ್ಕದ ವಾರ್ಡಗಳಿಗೆ ಹೋಗಿ ಲಸಿಕೆ ಪಡೆಯಬೇಕಾಯಿತು.
ಸಿಬ್ಬಂದಿಯ ಈ ವರ್ತನೆಯಿಂದ ಆಕ್ರೋಶಗೊಂಡ ಜನರು ಇಲಾಖೆ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನು, ಈ ಮೊದಲು ಕೂಡ ಇದೇ ಕೇಂದ್ರದಲ್ಲಿ ಇಂತಹದ್ದೇ ಸಮಸ್ಯೆ ಕಂಡಬಂದಿದೆ ಎಂದು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಬಿಬಿಎಂಪಿಯ ಆರೋಗ್ಯ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್,
ಬೆಂಗಳೂರು.
PublicNext
14/04/2022 10:17 pm