ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಿಲ್ಲೆಒತ್ತಡ ನಿವಾರಣೆಗೆ ಯೋಗದ ಮೊರೆ ಹೋದ ಪೊಲೀಸರು

ದೊಡ್ಡಬಳ್ಳಾಪುರ: ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ಚಟುವಟಿಕೆಗಳನ್ನ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸರು ಸದಾ ಒತ್ತಡದಲ್ಲಿ ಬದುಕುತ್ತಾರೆ. ಪೊಲೀಸರು ಒತ್ತಡ ಮುಕ್ತ ಜೀವನ ನಡೆಸುವ ಸಲುವಾಗಿ ಪೊಲೀಸರಿಗೆ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿದೆ.

ನಗರದ ಬಾಬು ಜಗಜೀವನ್ ರಾಂ ಭವನದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ವ್ಯಾಪ್ತಿಯಲ್ಲಿನ ಪೊಲೀಸ್ ಸಿಬ್ಬಂದಿಗಾಗಿ 5 ದಿನಗಳ ಯೋಗ, ಧ್ಯಾನ ಶಿಬಿರದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನವರು ಪೊಲೀಸರಿಗೆ ಒತ್ತಡ ಮುಕ್ತ ಬದುಕಿನ ಬಗ್ಗೆ ತರಬೇತಿ ಯನ್ನ ಕೊಡುತ್ತಿದ್ದಾರೆ. ರಜೆ ಇಲ್ಲದೆ ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕವಾಗಿಯೂ ಬಳಲುತ್ತಿರುತ್ತಾರೆ. ಕುಟುಂಬದೊಂದಿಗೂ ಪೊಲೀಸರು ಸಮಯವನ್ನ ಕಳೆದಿರೋದಿಲ್ಲ. ಯೋಗ ಮತ್ತು ಧ್ಯಾನ ಶಿಬಿರದಿಂದ ಪೊಲೀಸರು ಒತ್ತಡ ಮುಕ್ತ ಬದುಕನ್ನ ನಡೆಸಲು ಸಹಕಾರಿಯಾಗಲಿದೆ.

ಸಿಬ್ಬಂದಿಗಳ ಕೊರತೆ ಸಹ ಪೊಲೀಸರ ಮೇಲಿನ ಒತ್ತಡಕ್ಕೆ ಕಾರಣವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ, ಸಿಬ್ಬಂದಿಗಳ ನೇಮಕಾತಿ ಅತ್ಯಂತ ತ್ವರೀತವಾಗಿ ನಡೆಯುತ್ತಿದೆ. ನೇಮಕಗೊಂಡ ಪೊಲೀಸರು ತರಬೇತಿಯಲ್ಲಿದ್ದು ಅವರೆಲ್ಲ ಸೇವೆಗೆ ನಿಯೋಜನೆಯಾದರೆ ಸಿಬ್ಬಂದಿಗಳ ಕೊರತೆ ಇರುವುದಿಲ್ಲ ಎಂದರು.

Edited By :
Kshetra Samachara

Kshetra Samachara

24/03/2022 12:04 pm

Cinque Terre

2.37 K

Cinque Terre

0

ಸಂಬಂಧಿತ ಸುದ್ದಿ