ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಪೂರ್ವ ತಾಲೂಕು ವೈದ್ಯಧಿಕಾರಿ ಡಾ.ಚಂದ್ರಶೇಖರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪೂರ್ವ ತಾಲೂಕಿನಲ್ಲಿ ಒಟ್ಟು ಇಪ್ಪತ್ತು ಮೂರು ಸಾವಿರ ಮಕ್ಕಳು ಐದು ವರ್ಷದೊಳಗೆ ಇದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕಲಾಗುವುದು ಎಂದರು. ಪೋಲಿಯೊ ಮುಕ್ತ ಭಾರತದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
Kshetra Samachara
27/02/2022 05:35 pm