ನೆಲಮಂಗಲ: ಬೆಂಗಳೂರಿನ ಜನಕ್ಕೆ ಮತ್ತೆ ಆತಂಕ ಶುರು ಆಗಿದೆ. ಕೊರೊನಾ ಸೋಂಕು ಹೆಚ್ಚುತ್ತಿದೆ. ವೀಕೆಂಡ್ ಕರ್ಫ್ಯೂ ಕೂಡ ಜಾರಿ ಆಗಿದೆ. ಇದರಿಂದ ಇಲ್ಲಿ ವಾಸವಾಗಿದ್ದ ಜನ ಮತ್ತೆ ತಮ್ಮೂರಿನತ್ತ ಹೊರು ನಿಂತಿದ್ದಾರೆ.
ಹೌದು ಮತ್ತೆ ಬೆಂಗಳೂರಿನಲ್ಲಿ ವಾಸವಿದ್ದ ಜನಕ್ಕೆ ಮತ್ತೆ ಲಾಕ್ ಡೌನ್ ಭಯ ಶುರು ಆಗಿದೆ. ವೀಕೆಂಡ್ ಕರ್ಫ್ಯೂ ಜಾರಿ ಬೇರೆ ಆಗಿದೆ. ಇದರಿಂದ ಆತಂಕಗೊಂಡ ಜನ ಮಕ್ಕಳು,ಲಗೇಜು ಹೀಗೆ ಎಲ್ಲವನ್ನೂ ಹೊತ್ತುಕೊಂಡು ತಮ್ಮೂರಿಗೆ ಹೊರಟು ಬಿಟ್ಟಿದ್ದಾರೆ.
ಇದರಿಂದ ಜಾಲಹಳ್ಳಿ ಕ್ರಾಸ್,ದಾಸರಹಳ್ಳಿ,8ನೇ ಮೈಲಿ ಸರ್ವಿಸ್ ರಸ್ತೆಯಲ್ಲಿ ಜನರ ದಂಡು ಕಾಣುತ್ತಿದೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಜನ ಪ್ರಯಾಣ ಬೆಳೆಸುತ್ತಿದ್ದಾರೆ.
PublicNext
07/01/2022 07:38 pm