ಬೆಂಗಳೂರು: ʼNo Smoking Dayʼ ಅಂಗವಾಗಿ ಬಿಬಿಎಂಪಿ, ಬೆಂಗಳೂರಿನಲ್ಲಿ ಇಂದು ತಂಬಾಕು ದುಷ್ಪರಿಣಾಮ ಕುರಿತು ಜನಜಾಗೃತಿಯ ಬೀದಿನಾಟಕ ಪ್ರದರ್ಶನ ಏರ್ಪಡಿಸಿತ್ತು. ʼವಿಶ್ವ ಭಾರತಿ-ಶೂನ್ಯʼ ಕಲಾತಂಡ ನಗರದ ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಕಾರ್ಪೊರೇಷನ್ ಸರ್ಕಲ್ ನಲ್ಲಿ "ತಂಬಾಕು ಸುಟ್ಟಾಕು-ತಂಬಾಕು ಬಿಟ್ಟಾಕು"ಎಂಬ ಬೀದಿ ನಾಟಕದ ಮೂಲಕ ಅರಿವು ಮೂಡಿಸಿತು.
ಧೂಮಪಾನದಿಂದ ಕ್ಯಾನ್ಸರ್, ಚರ್ಮ ಕಾಯಿಲೆ, ಕರುಳು ಬೇನೆ, ಕ್ಷಯ, ಬಾಯಿಗಡ್ಡೆ, ಹೊಟ್ಟೆಗಡ್ಡೆ, ಹೃದಯ ಸಂಬಂಧಿ ಹೀಗೆ ಹತ್ತಾರು ಕಾಯಿಲೆ ಜೀವವನ್ನು ಬಲಿ ಪಡೆಯುತ್ತವೆ. ಗಂಡ-ಹೆಂಡತಿ ಜಗಳ, ಯುವಕ- ಯವತಿಯರು ಧೂಮಪಾನ- ಮದ್ಯಪಾನಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಜೀವ- ಜೀವನ ನಾಶ ಮಾಡಿಕೊಳ್ತಾರೆ. ʼಬೀಡಿ-ಸಿಗರೇಟಿಗೆ ಬೆಂಕಿ ಇಟ್ಟು ನಿಮ್ಮ ಜೀವನ ಸುಟ್ಟುಕೊಳ್ಳಬೇಡಿʼ ಎಂಬ ಜನಜಾಗೃತಿಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ.
ಬೆಂಗಳೂರಿನ ವಿಶ್ವಭಾರತಿ & ಶೂನ್ಯ ಕಲಾತಂಡ, ಕೃಷ್ಣರಾಜಪುರದ ಕಿತ್ತಗನೂರಿನ ಶಿಶುಮಂದಿರದ VTC ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಬೀದಿನಾಟಕವಾಡಿದರು. ಯಮ, ಚಿತ್ರಗುಪ್ತ, ಸ್ಮೋಕಿ, ಕಾಲೇಜ್ ಕ್ಯಾಂಪಸ್ ನಲ್ಲಿ ಸ್ಮೋಕಿಂಗ್, ಕುಟುಂಬದ ಪಾತ್ರಗಳು ಧೂಮಪಾನದ ಅನಾಹುತ ಬಗ್ಗೆ ಮಾಡಿದ ಬೀದಿನಾಟಕ ಅದ್ಭುತವಾಗಿತ್ತು. ಜನರಲ್ಲಿ ಈ ಬೀದಿನಾಟಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಅಂದ್ರೆ ತಪ್ಪಲ್ಲ.
- ಸುರೇಶ್ ಬಾಬು, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
09/03/2022 10:52 pm