ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂಜಿ ನೋಡುತ್ತಲೇ ಕಣ್ಣೀರು ಹಾಕಿದ ಮಕ್ಕಳು; ಸಮಾಧಾನ ಪಡಿಸಿದ ಸಚಿವರು

ಬೆಂಗಳೂರು: ಇಂದಿನಿಂದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತಿದೆ. ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆಯಲ್ಲಿ ಲಸಿಕಾಕರಣ ಕಾರ್ಯಕ್ರಮವನ್ನು ಸಚಿವ ಸುಧಾಕರ್, ನಾಗೇಶ್ ಉದ್ಘಾಟಿಸಿದರು.‌

ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಶಾಲಾ ಮಕ್ಕಳು ಸೂಜಿ ನೋಡುತ್ತಲೇ ಭಯ ಪಟ್ಟು ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ನಂತರ ಇಬ್ಬರು ಸಚಿವರು ಮಕ್ಕಳನ್ನು ಸಮಾಧಾನಪಡಿಸಿ ಲಸಿಕೆಯನ್ನು ಕೊಡಿಸಿದರು. ಬೆಂಗಳೂರು ಉತ್ತರ ವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಧನುಷ್ ಎಸ್.ಎಂ ಎಂಬ ವಿದ್ಯಾರ್ಥಿಯು ಮೊದಲ ಲಸಿಕೆಯನ್ನು ಪಡೆದುಕೊಂಡರು.

Edited By :
Kshetra Samachara

Kshetra Samachara

16/03/2022 09:31 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ