ವರದಿ - ಗಣೇಶ್ ಹೆಗಡೆ
ಬೆಂಗಳೂರು: ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ಕೊರೋನಾ ತಾಣವಾಗಿ ಮಾರ್ಪಾಡು ಅಗ್ತಿದೇಯಾ ಎಂಬ ಪ್ರಶ್ನೆ ಉದ್ಬವವಾಗಿದೆ.
ಪರಿಷತ್ ಕಚೇರಿಯ ಮುಂದೆ ಸಾವಿರಾರು ನರ್ಸಿಂಗ್ ವಿದ್ಯಾರ್ಥಿಗಳು ಜಮಾವಣೆ ಯಾಗಿದ್ದರು.
ಗಾಂಧಿ ನಗರದಲ್ಲಿ ಇರುವ ಶುಶ್ರೂಷ ಪರಿಷತ್ ಆವರಣದಲ್ಲಿ ಹೊರ ರಾಜ್ಯದ ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗ ಗಳಿಂದ ಸಾವಿರಾರು ವಿದ್ಯಾರ್ಥಿ ಗಳು ಬಂದಿದ್ದರು.
ಈ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಅಗಿದ್ದು, ಸಾಮಾಜಿಕ ಅಂತರವನ್ನು ವಿದ್ಯಾರ್ಥಿಗಳು ಮರೆತಿದ್ದರು.
ಕೆಎನ್‌ಸಿ ರಿಜಿಸ್ಟರ್ ಮಾಡಿಸಲು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದ್ದರು.ಇದೀಗ ವಿದ್ಯಾರ್ಥಿಗಳ ಅಹವಾಲನ್ನು ಅಧಿಕಾರಿಗಳು ಸ್ವೀಕರಿಸುತ್ತಿದ್ದಾರೆ.
Kshetra Samachara
19/01/2022 05:57 pm