ಬೆಂಗಳೂರು:ಕೋವಿಡ್ ಇಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರ ಬೆನ್ನಲ್ಲಿಯೇ ಕಂಟೈನ್ಮೆಂಟ್ ಜೋನ್‌ಗಳ ಸಂಖ್ಯೆನೂ ಡಬಲ್-ಟ್ರಿಪಲ್ ಆಗುತ್ತಿದೆ.ಬನ್ನಿ, ಹೇಳ್ತೀವಿ ಇದರ ಇನ್ನಷ್ಟು ಡಿಟೈಲ್ಸ್.
ನಿರೀಕ್ಷೆ ಮೀರಿ ಕೋವಿಡ್ ಸೋಂಕು ಬೆಂಗಳೂರಲ್ಲಿ ಹರಡುತ್ತಲೇ ಇದೆ. ಇದರಿಂದ ಇಲ್ಲಿ ಈಗ 412 ಕಂಟೈನ್ಮೆಂಟ್ ಜೋನ್ ಆಗಿವೆ.ಇವುಗಳಲ್ಲಿ ಎರಡು ಜೋನ್ ಅಂತು ಭಾರಿ ಡೇಂಜರಸ್ ಆಗಿಯೇ ಇವೆ. ನಿಜ, ಮಹದೇವಪುರ & ಬೊಮ್ಮನಹಳ್ಳಿ ವಲಯಗಳಲ್ಲಿ ಈಗಾಗಲೇ 243 ಕಂಟೈನ್ಮೆಂಟ್ ಜೋನ್‌ಗಳೇ ಆಗಿಬಿಟ್ಟಿವೆ.
ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಜೋನ್ ಗಳು ಇವೆ ಗೊತ್ತೇ ? ಇಲ್ಲಿದೆ ನೋಡಿ ಆ ಪಟ್ಟಿ
ಬೊಮ್ಮನಹಳ್ಳಿ ವಲಯ - 100
ಮಹದೇವಪುರ - 143
ದಕ್ಷಿಣ ವಲಯ - 49
ಪಶ್ಚಿಮ ವಲಯ - 44
ಪೂರ್ವ ವಲಯ - 33
ಯಲಹಂಕ ವಲಯ - 33
ದಾಸರಹಳ್ಳಿವಲಯ - 6
ಆರ್‌ಆರ್ ನಗರ ವಲಯ - 4
ಒಟ್ಟು - 412 ಕಂಟೈನ್ಮೆಂಟ್ ಜೋನ್ ಗಳು
ಒಟ್ಟಾರೆ, ಇಡೀ ಬೆಂಗಳೂರು ಕೋವಿಡ್ ಸೋಂಕಿನಿಂದ ತತ್ತರಿಸುತ್ತಿದೆ. ದಿನೇ ದಿನೇ ಇಲ್ಲಿ ಸೋಂಕು ಹೆಚ್ಚುತ್ತಿರೋದ್ರಿಂದ ಜನರಲ್ಲಿ ಆತಂಕವೂ ಹೆಚ್ಚುತ್ತಿದೆ.
PublicNext
11/01/2022 04:52 pm