ಯಲಹಂಕ: ಜನರು ಕೊರೊನಾ ನಿಯಮಾವಳಿ ಪಾಲಿಸಿ ಸರ್ಕಾರದ ಜೊತೆ ಕೈಜೋಡಿಸಿ ಬಿಬಿಎಂಪಿಗೆ ಸಹಕರಿಸಬೇಕೆಂದು ಶಾಸಕ ವಿಶ್ವನಾಥ್ ಮನವಿ ಮಾಡಿದ್ದಾರೆ. ಯಲಹಂಕ, ಬ್ಯಾಟರಾಯನಪುರ 11 ವಾರ್ಡ್ ಗಳಲ್ಲಿ ಪ್ರಸ್ತುತ 221 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಯಲಹಂಕ 4 ವಾರ್ಡ್ ಗಳ 67 ಜನರಲ್ಲಿ, ಬ್ಯಾಟರಾಯನಪುರದ 141 ಮಂದಿಯಲ್ಲಿ ಕೋವಿಡ್ ಕಂಡುಬಂದಿದೆ. ಒಟ್ಟು 221 ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದ್ದು, ಸಾವು ಸಂಭವಿಸಿಲ್ಲ.
ಇದುವರೆಗೆ 30650 ಶಾಲಾ ಮಕ್ಕಳಿಗೆ ವ್ಯಾಕ್ಸಿನೇಷನ್ ಡ್ರೈವ್ ಮುಂದುವರೆದಿದೆ. ಇದುವರೆಗೆ ಪತ್ತೆಯಾಗಿರುವ 18 ಒಮಿಕ್ರಾನ್ ಕೇಸ್ ಗ ಳಲ್ಲಿ ಮೂವರು ಗುಣಮುಖರಾಗಿದ್ದಾರೆ. ಇನ್ನು 15 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಸೋಂಕಿತರಿಗೆ ಹೋಂ ಐಸೋಲೇಷನ್ ಜೊತೆಗೆ ಅನಿವಾರ್ಯ ಇರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಂಪಿಗೇಹಳ್ಳಿ ವ್ಯಾಪ್ತಿಯ ಹಜ್ ಭವನದಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಯಲಹಂಕ ತಾಲೂಕು ಕಚೇರಿಯಲ್ಲಿನ ಕೊರೊನಾ ಕಮಾಂಡ್ ಸೆಂಟರ್ ನಲ್ಲಿ 18 ಸಿಬ್ಬಂದಿ 3 ಶಿಫ್ಟ್ ಗಳಲ್ಲಿ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ.
ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ 13 ವೆಂಟಿಲೇಟರ್ ಸಮೇತ 32-ICU ಬೆಡ್ ಗಳ ವ್ಯವಸ್ಥೆ ಇದೆ. ಜನರು ಸರ್ಕಾರದ ನಿಯಮ ಪಾಲಿಸಿ, ಸಹಕಾರ ನೀಡಬೇಕು ಎಂದು ಶಾಸಕ S.R.ವಿಶ್ವನಾಥ್ ಮತ್ತು ಯಲಹಂಕ ಜಂಟಿ ಆಯುಕ್ತರು ವಿನಂತಿಸಿದ್ದಾರೆ.
Kshetra Samachara
06/01/2022 02:19 pm