ದೇವನಹಳ್ಳಿ: ರಾಜ್ಯದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದ್ದರಿಂದ ಲಾಕ್ ಡೌನ್ ಸುಳಿವನ್ನು ಸಚಿವ ಎಂಟಿಬಿ ನಾಗರಾಜ್ ಕೊಟ್ಟಿದ್ದಾರೆ. ದೇವನಹಳ್ಳಿಯಲ್ಲಿ15 ವರ್ಷ ಮೇಲ್ಪಟ್ಟ ಶಾಲಾ ಮಕ್ಕಳ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರು ಸರ್ಕಾರ ಮತ್ತು ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಸರ್ಕಾರದ ನಿಯಮಾವಳಿ ಎಲ್ಲರೂ ಪಾಲಿಸಬೇಕು. ಸಹಕಾರ ನೀಡದಿದ್ರೆ, ರೆಡ್ ಜೋನ್ ಮತ್ತು ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಎಂಟಿಬಿ ಸುಳಿವು ನೀಡಿದರು. ಇನ್ನು, ಮೂರು ದಿನಗಳಲ್ಲಿ ಸಿಎಂ ಅವರು ತಜ್ಞರು, ಸಲಹಾ ಸಮಿತಿ ಜೊತೆ ಸಭೆ ನಡೆಸಲಿದ್ದಾರೆ. ಜನರೆಲ್ಲ ಸ್ವಯಂ ನಿಯಂತ್ರಣ ಹಾಕಬೇಕು ಎಂದರು.
"ಎಲ್ಲ ಮುಗಿದ ಮೇಲೆ ಎಚ್ಚೆತ್ತುಕೊಳ್ಳುವತ್ತ ಸರ್ಕಾರ ಹೆಜ್ಜೆ ಇಡುತ್ತಿದೆಯಾ !? ವಿದೇಶಿ ವಿಮಾನ ಹಾರಾಟ ಮೊದಲೇ ಸ್ಥಗಿತಗೊಳಿಸಿದ್ದರೆ ಇಷ್ಟೆಲ್ಲ ಅನಾಹುತ ಆಗುತ್ತಿದ್ದವಾ?" ಎಂಬುದು ಜನರ ಪ್ರಶ್ನೆ.
Kshetra Samachara
03/01/2022 03:15 pm