ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಇಂದು ವಿದೇಶದಿಂದ‌ ಬಂದ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್

ದೇವನಹಳ್ಳಿ: ಹೈ ರಿಸ್ಕ್ ದೇಶಗಳಿಂದ ಇಂದು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ‌ ಆಗಮಿಸಿದ 12 ಮಂದಿ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮುಖ್ಯವಾಗಿ ಇಂಗ್ಲೆಂಡ್ ನಿಂದ ಬಂದ ನಾಲ್ವರಿಗೆ, ಅಮೆರಿಕದಿಂದ ಬಂದ ಇಬ್ಬರಿಗೆ, ಸ್ಪೇನ್ ನಿಂದ ಆಗಮಿಸಿದ ಇಬ್ಬರಲ್ಲಿ, ಹಾಗೆಯೇ ಡೆನ್ಮಾರ್ಕ್ ನಿಂದ ಬಂದ ಓರ್ವನಲ್ಲಿ, ಟರ್ಕಿಯಿಂದ ಬಂದ ಇಬ್ಬರಲ್ಲಿ ಹಾಗೂ ಫ್ರಾನ್ಸ್ ನಿಂದ ಬಂದ ಓರ್ವನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಎಲ್ಲ 12 ಮಂದಿ ಸೋಂಕಿತರನ್ನು K.I.A. ಏರ್‌ ಪೋರ್ಟ್‌ ನಿಂದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲ ಸೋಂಕಿತರ ಸ್ಯಾಂಪಲ್ ನ್ನು ಲ್ಯಾಬ್ ಗೆ ರವಾನಿಸಲಾಗಿದ್ದು, ಅಧಿಕಾರಿಗಳು ಸೋಂಕಿತರ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.

Edited By : Nagaraj Tulugeri
PublicNext

PublicNext

03/01/2022 12:36 pm

Cinque Terre

17.13 K

Cinque Terre

3

ಸಂಬಂಧಿತ ಸುದ್ದಿ