ವರದಿ: ಗಣೇಶ್ ಹೆಗಡೆ
ಬೆಂಗಳೂರು: ಒಮಿಕ್ರಾನ್ ಪೀಡಿತ ವೈದ್ಯರೊಬ್ಬರ ಜತೆ ಸಂಪರ್ಕದಲ್ಲಿದ್ದ ಐವರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ.
ಹೌದು, ಬಿಬಿಎಂಪಿ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ರಾಜ ಧಾನಿಯಲ್ಲಿ ಒಮಿಕ್ರಾನ್ ಸಂಖ್ಯೆ ಏರಿಕೆ ಕಂಡಿದೆ.
ಜೆ.ಪಿ.ನಗರ 7 ಹಂತ ರಸ್ತೆ ಬಳಿಯ ಮನೆ ನಿವಾಸಿ ವೈದ್ಯರೊಬ್ಬರಲ್ಲಿ ಕಳೆದ ತಿಂಗಳು ಒಮಿಕ್ರಾನ್ ಪತ್ತೆಯಾಗಿತ್ತು. ಅವರ ಸಂಪರ್ಕದಲ್ಲಿದ್ದ ಐವರನ್ನು ಟೆಸ್ಟ್ ಗೆ ಒಳಪಡಿಸಿದಾಗ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು.
ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದರು. ಇದೀಗ 14 ದಿನಗಳ ಬಳಿಕ ಮತ್ತೆ ಟೆಸ್ಟ್ ಗೆ ಒಳಪಡಿಸಿದಾಗ ಒಮಿಕ್ರಾನ್ ಪತ್ತೆ ಆಗಿದೆ ಎಂದು ಬಿಬಿಎಂಪಿ ಸಿಹೆಚ್ಒ ಮಾಹಿತಿ ನೀಡಿದ್ದಾರೆ.
Kshetra Samachara
08/12/2021 04:29 pm