ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಯಿ ಸಾಕಲು ಇನ್ನು ಮುಂದೆ ಲೈಸೆನ್ಸ್ ಕಡ್ಡಾಯ!; ಪಾಲಿಕೆ ಚಿಂತನೆ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ನೀವೂ ಶ್ವಾನ ಪ್ರಿಯರೇ? ಮನೆಯಲ್ಲಿ ಪೆಟ್ ಡಾಗ್ ಇವೇಯಾ...? ಹಾಗಿದ್ರೆ ಈ ಸ್ಟೋರಿ ನೋಡಲೇ ಬೇಕು.

ಹೌದು. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಕು ನಾಯಿಗಳಿಗೆ ಲೈಸೆನ್ಸ್ ಕಡ್ಡಾಯಗೊಳಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.

ಬಿಬಿಎಂಪಿ ಕಾಯ್ದೆ -2020ರ ಅನ್ವಯ ಪಾಲಿಕೆ ಅಧಿಕಾರಿಗಳು ನಗರದ ಮನೆಗಳಲ್ಲಿ ಸಾಕುವ ನಾಯಿಗಳಿಗೆ ಲೈಸೆನ್ಸ್ ಕಡ್ಡಾಯ ಹಾಗೂ ಮಾಲೀಕರು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು ಅಂತಿಮ ನಿರ್ಧಾರವಾಗಿಲ್ಲ ಎಂದರು.

ಈಗಾಗಲೇ 2017ರಿಂದ ಬೆಂಗಳೂರಲ್ಲಿ ಸಾಕು ನಾಯಿಗಳ ನೋಂದಣಿ ಕಾರ್ಯವನ್ನು ಬಿಬಿಎಂಪಿ ‌ಮಾಡುತ್ತಿದೆ. ನಗರದಲ್ಲಿ ಸುಮಾರು 80 ಸಾವಿರ ಸಾಕು ನಾಯಿಗಳು ಇವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

10/11/2021 02:47 pm

Cinque Terre

350

Cinque Terre

0

ಸಂಬಂಧಿತ ಸುದ್ದಿ