ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹೊಸ ಪ್ಲಾನ್ ರೂಪಿಸಿದೆ. ಹಿರಿಯ ನಾಗರಿಕರು ಇನ್ಮುಂದೆ ತಮ್ಮ ಕುಂದು ಕೊರತೆಗಳಿಗಾಗಿ ಠಾಣೆಗಳಿಗೆ ಅಲೆದಾಡುವುದನ್ನ ತಪ್ಪಿಸಲು ಸಹಾಯವಾಣಿ ಆರಂಭಿಸಿದೆ. ಜಸ್ಟ್ ಟೋಲ್ ಫ್ರೀ ನಂ ಗೆ ಕಾಲ್ ಮಾಡಿದ್ರೆ ಸಾಕು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ಭರವಸೆಯನ್ನ ಬೆಂಗಳೂರು ಪೊಲೀಸರು ನೀಡಿದ್ದಾರೆ.
ವಯೋವೃದ್ದರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ 1090 ನಂಬರಿನ ಟೋಲ್ ಫ್ರೀ ಸಹಾಯವಾಣಿ ತೆರೆದಿದೆ. ವಯೋವೃದ್ದರ ಸಮಸ್ಯೆಗಳನ್ನ ಆಲಿಸಲು ಇದು ಸಹಕಾರಿಯಾಗಲಿದೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಟೋಲ್ ಫ್ರೀ ಸಹಾಯವಾಣಿ ಉದ್ಘಾಟನೆಯಾಗಿದೆ. ವಯೋವೃದ್ಧರ ಸಮಸ್ಯೆಯನ್ನ ಆಲಿಸಲು ಈ ಸಹಾಯವಾಣಿ ಸಹಕಾರವಾಗಲಿದೆ.
PublicNext
15/06/2022 04:55 pm