ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು- ಫ್ಲವರ್ ಶೋ ಇತಿಹಾಸದಲ್ಲೇ ಅತೀ ಹೆಚ್ಚು ಜನ ವೀಕ್ಷಣೆ, ದಾಖಲೆಯ ಹಣ ಕಲೆಕ್ಷನ್!

ಐತಿಹಾಸಿಕ ಲಾಲ್ಬಾಗ್ನ 212ನೇ ಫಲಪುಷ್ಟ ಪ್ರದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಫ್ಲವರ್ ಶೋ ಇತಿಹಾಸದಲ್ಲೇ ಅತೀ ಹೆಚ್ಚು ಜನ ಪ್ರವಾಸಿಗರು ವೀಕ್ಷಣೆ ಮಾಡಿದ್ದು ದಾಖಲೆಯ ಹಣ ಸಂಗ್ರಹವಾಗಿದೆ. 11 ದಿನಗಳಲ್ಲಿ 8 ಲಕ್ಷ ಜನ ಭಾಗಿಯಾಗಿದ್ದು ಈ ವರ್ಷದ ವಿಶೇಷತೆ…

ಕಳೆದ 2 ವರ್ಷದಿಂದ ಕೊರೊನಾದಿಂದಾಗಿ ಕಳೆಗುಂದಿದ ಐತಿಹಾಸಿಕ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಈ ವರ್ಷ ಜೀವಕಳೆ ಬಂದಿತ್ತು. 3 ಶೋ ರದ್ದಾಗಿದ್ರಿಂದ ಪ್ರವಾಸಿಗರು ನಿರಾಶರಾಗಿದ್ರು. ಅದೆಲ್ಲವನ್ನು ಮರೆಸುವಂತೆ ಈ ವರ್ಷ ಸಸ್ಯಕಾಶಿಯಲ್ಲಿ ನಮ್ಮನ್ನಗಲಿಗೆ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಹೂಗಳಲ್ಲಿ ರಾಜ್ ಉತ್ಸವವನ್ನು ಸೃಷ್ಟಿಸಲಾಗಿತ್ತು. ಈ ವರ್ಷದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದುಬಂದು ರಾಜ್ ಗತವೈಭವವನ್ನು ಕಣ್ತುಂಬಿಕೊಂಡಿದ್ದಾರೆ.

ಲಾಲ್ ಭಾಗ್ ಫ್ಲವರ್ ಶೋನ 212 ವರ್ಷಗಳ ಇತಿಹಾಸದಲ್ಲಿ ಅತೀ ಹೆಚ್ಚು ಜನ ಈ ವರ್ಷ ಭಾಗಿಯಾಗಿದ್ದಾರೆ ಹಾಗೂ ದಾಖಲೆಯ ಟಿಕೆಟ್ ಹಣ ಸಂಗ್ರಹವಾಗಿದೆ. 11 ದಿನ ನಡೆದ ವೈಭವದ ಉತ್ಸವದಲ್ಲಿ 8,34,552 ಪ್ರವಾಸಿಗರಿಂದ ಭಾಗಿಯಾಗಿದ್ದಾರೆ, 3,31,90,430 ರೂ ಟಿಕೆಟ್ ಹಣ ಸಂಗ್ರಹವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಾದ ನೆನ್ನೆ ಒಂದೇ ದಿನ 2,99,176 ಪ್ರವಾಸಿಗರು ವೀಕ್ಷಣೆ ಮಾಡಿದ್ದು, 90,50,790 ರೂ. ಸಂಗ್ರಹ ಸಂಗ್ರಹವಾಗಿದೆ ಇದು ದಿನದ ಗಳಿಕೆಯಲ್ಲಿ ಈವರೆಗಿನ ದಾಖಲೆಯಾಗಿದೆ.

11 ದಿನದ ಪ್ರವಾಸಿಗರ ವಿವರ, ಹಣ ಸಂಗ್ರಹದ ಮಾಹಿತಿ ನೋಡೋದಾದ್ರೆ….

ದಿನಾಂಕ ಪ್ರವಾಸಿಗರ ಸಂಖ್ಯೆ ಟಿಕೆಟ್ ಹಣ

5-6-2022 23,283 12,06,950 ರೂ

6-6-2022 10,669 2,94,660 ರೂ

7-6-2022 24,956 8,60,855 ರೂ

8-6-2022 30,972 8,60,290 ರೂ

9-6-2022 67,072 32,64,670 ರೂ

10-6-2022 30,656 10,18,745 ರೂ

11-6-2022 45,570 13,72,550 ರೂ

12-6-2022 45,354 14,51,440 ರೂ

13-6-2022 83,196 38,99,645 ರೂ

14-6-2022 1,53,628 78,07,835 ರೂ

15-6-2022 2, 99,176 90,50,790 ರೂ

ಒಟ್ಟು 8,34,552 3,31,90,430

ಇನ್ನು ಗಾಜಿನಮನೆಯಲ್ಲಿ ಸಿಂಗಾರಗೊಂಡ ರಾಜ್ ಉತ್ಸವಕ್ಕೆ ಖರ್ಚಾಗಿದ್ದು ಅಂದಾಜು 2 ಕೋಟಿ, ಆದಾಯ ಬಂದಿರೋದು 3.22 ಕೋಟಿ. ಈ ಫ್ಲವರ್ ಶೋನಿಂದ 1 ಕೋಟಿಗೂ ಹೆಚ್ಚು ಲಾಭ ಬಂದಿದೆ, ಬಂದ ಲಾಭವನ್ನು ಪುನೀತ್ ಅವರ ಆಶಯದಂತೆ ಸಮಾಜಸೇವೆಗೆ ಬಳಸುವುದಾಗಿ ಸಚಿವ ಮುನಿರತ್ನ ತಿಳಿಸಿದ್ದರು. ಸದ್ಯ ಕಲೆಕ್ಟ್ ಆಗಿರೋ ಹಣವೆಲ್ಲಾ ಮೈಸೂನು ಉದ್ಯಾನ ಸಂಘದ ಬಳಿಯಿದ್ದು ಮುಂದಿನವಾರ ನಡೆಯುವ ಮೀಟಿಂಗ್ ನಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ಬಂದ ಲಾಭವನ್ನು ಯಾವ ರೀತಿ ಸಮಾಜಸೇವೆಗೆ ಕೊಡಬೇಕು ಎಂಬುದನ್ನು ನಿರ್ಧರಿಸಲಾಗುವುದು...

ಉತ್ಸವವನ್ನು ಲಾಲ್ ಬಾಗ್ ತೋಟಗಾರಿಕಾ ಇಲಾಖೆ ಯಾವುದೇ ಸಮಸ್ಯೆ ಇಲ್ಲದೆ ಅಚ್ಚುಕಟ್ಟಾಗಿ ಮುಗಿಸಿದೆ. 8 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಶೋ ಮುಗಿದ್ರೂ ಪ್ರವಾಸಿಗರು ಗಾಜಿನ ಮನೆಯತ್ತ ಬರ್ತಿದ್ದಾರೆ. ಇಷ್ಟು ಬೇಗ ಫ್ಲವರ್ ಶೋ ಮುಗಿದೋಯ್ತಲ್ಲ ಮತ್ತಷ್ಟು ದಿನ ಮುಂದುವರಿಸಬಾರದಿತ್ತಾ ಎನ್ನುತ್ತಿದ್ದಾರೆ ಪುನೀತ್ ಅಭಿಮಾನಿಗಳು.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By :
PublicNext

PublicNext

17/08/2022 02:56 pm

Cinque Terre

22.99 K

Cinque Terre

1

ಸಂಬಂಧಿತ ಸುದ್ದಿ