ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಏ.30 ರಂದು ರಾಜೀವ್ ಗಾಂಧಿ ಆರೋಗ್ಯ ವಿವಿ 24 ನೇ ವಾರ್ಷಿಕ ಘಟಿಕೋತ್ಸವ

ಬೆಂಗಳೂರು: ಇದೇ ತಿಂಗಳ 30 ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ, ಡಾ. ಬಿ.ಎಸ್ ಗಂಗಾಧರ್ ಹಾಗೂ ಡಾ.ರಾಜನ್ ದೇಶಪಾಂಡೆ ಅವರಿಗೆ 'ಡಾಕ್ಟರೇಟ್ ಆಫ್ ಸೈನ್ಸ್' ಪ್ರದಾನ ಮಾಡಲಾಗುತ್ತಿದೆ.

ನಗರದಲ್ಲಿಂದು ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿವಿಯ ಕುಲಪತಿ ಡಾ.ಎಂ.ಕೆ.ರಮೇಶ್ , ಒಟ್ಟು 83 ವೈದ್ಯಕೀಯ ವಿದ್ಯಾರ್ಥಿಗಳು 100 ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ. ಪ್ರಸ್ತುತ ಶೈಕ್ಷಣಿಕ ವಾರ್ಷಿಕ ಸಾಲಿನಲ್ಲಿ 43,883 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದರು.

ಒಟ್ಟು 82 ಪಿಎಸ್ ಡಿ, 146 ಸೂಪರ್ ಸ್ಪೆಷಾಲಿಟಿ, 6,796 ಸ್ನಾತಕೋತ್ತರ ಪದವಿ, 78 ಸ್ನಾತಕೋತ್ತರ ಡಿಪ್ಲೊಮಾ ಪದವಿ, 365 ಫೆಲೋಶಿಪ್ ಕೋರ್ಸ್, 10 ಸರ್ಟಿಫಿಕೇಟ್ ಕೋರ್ಸ್ ಹಾಗೂ 36,409 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.ಇನ್ನೂ ಒಟ್ಟಾರೆ,ಶೇ. 82.25% ರಷ್ಟು ಫಲಿತಾಂಶ ವಿವಿಗೆ ಬಂದಿದೆ ಎಂದು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವಾಲಯದ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವ ಚಿನ್ನದ ಪದಕವು 22 ಕ್ಯಾರೆಟ್ ಬಂಗಾರವುಳ್ಳ ಐದು ಗ್ರಾಂ ತೂಕದ ಪದಕವಾಗಿರುತ್ತದೆ. ಅದೇ ರೀತಿ, ಪ್ರಥಮ ದರ್ಜೆಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ಚಿನ್ನದ ಪದಕಗಳಿಗೆ ವಿವಿಯ ಸಂಪನ್ಮೂಲದಿಂದ ಹಾಗೂ ದಾನಿಗಳು ದೇಣಿಗೆಯಾಗಿ ನೀಡಿರುವ ಹಣದ ನಿಧಿಯಿಂದ ವೆಚ್ಚವನ್ನು ಭರಿಸಲಾಗುವುದು ಎಂದು ಅವರು ವಿವರಿಸಿದರು.

ಡಾ.ಎಂ.ಕೆ.ರಮೇಶ್

ವಿವಿ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಚಿನ್ನ ಪಡೆದ ವೈದ್ಯರು..!

*ಮಂಗಳೂರಿನ‌ ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಿಸಿ ಕೋರ್ಸ್- ಡಾ.ಎನ್.ಶ್ವೇತ- 4 ಚಿನ್ನದ ಪದಕ

* ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜಿನ ಬಿಫಾರ್ಮಾ- ಅಭಿಷೇಕ್ ಪಾಂಡೆ-4 ಚಿನ್ನದ ಪದಕ

* ಚಿತ್ರದುರ್ಗ ಎಸ್ ಜೆಎಂ ಡೆಂಟಲ್ ಕಾಲೇಜು ಅಂಡ್ ಹಾಸ್ಟಿಟಲ್ ಬಿಡಿಎಸ್-ಡಾ.ಸುಮನ್ ಬಿ.ಗೋದಿ- 3 ಚಿನ್ನದ ಪದಕ

* ಬೆಂಗಳೂರು ಶ್ರೀ ಶ್ರೀ ಕಾಲೇಜು ಆಫ್ ಆಯುರ್ವೇದಿಕ್ ಸೈನ್ಸಸ್ ಅಂಡ್ ರಿಸರ್ಚ್ ಬಿಎಎಂಎಸ್- ಡಾ.ಶಶಿಕಲಾ ವಿ-3 ಚಿನ್ನದ ಪದಕ

* ಮಂಗಳೂರಿನ ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಪಿ-ಬಿಪಿಟಿ- ರೋಜಿನ ಮಾತಂಗುಲು- 3 ಚಿನ್ನದ ಪದಕ

* ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಲೈಡ್ ಕೋರ್ಸಿನ ವಿದ್ಯಾರ್ಥಿನಿ ಶಮೀಯತ್ ನುಸೈಬಾ-3 ಚಿನ್ನದ ಪದಕ

* ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ.ಪ್ರತೀಕ್ಷಾ ಜೆ.ಪೈ-2 ಚಿನ್ನದ ಪದಕ

* ರಾಯಚೂರು ನವೋದಯ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್- ಡಾ.ಸನ್ನಿಧಿ- 2 ಚಿನ್ನದ ಪದಕ

* ಕೆಎಲ್ ಇ ಸೊಸೈಟಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್- ಬಿಎಸ್ಸಿ ನರ್ಸಿಂಗ್- ವೀಣಾ ಸುರೇಶ್ ಸಿಂಗ್ ಶಿಗ್ಗಾವಿ- 2 ಚಿನ್ನದ ಪದಕ

Edited By : Manjunath H D
PublicNext

PublicNext

28/04/2022 07:28 pm

Cinque Terre

44.46 K

Cinque Terre

0

ಸಂಬಂಧಿತ ಸುದ್ದಿ