ಬೆಂಗಳೂರು : KEAಯಲ್ಲಿ ಸೀಟ್ ಬ್ಲ್ಯಾಕಿಂಗ್ ದಂಧೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ , ಸೀಟ್ ಬ್ಲ್ಯಾಕಿಂಗ್ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ಸರ್ಕಾರವೇ ಅಧಿಕಾರಿಗಳಿಂದ ಮಾಹಿತಿ ಪಡೆದು ದೂರು ನೀಡಿದ್ದೇವೆ. ಯಾವ ರೀತಿ ಅಕ್ರಮ ಆಗಿದೆ. ಈ ವರ್ಷ ಆಗಿದೆಯಾ? ಕಳೆದ ವರ್ಷ ಆಗಿದೆಯಾ ಎಲ್ಲದ್ರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇವೆ. ಕಳೆದ ಎರಡು ವರ್ಷಗಳ IP ಅಡ್ರೆಸ್‌ನಲ್ಲಿ ಹೇಗೆ ಆಪ್ಶನ್ ಎಂಟ್ರಿ ಮಾಡಿದ್ದಾರೆ ಅಂತ ತನಿಖೆ ಆಗ್ತಿದೆ.
ಸೀಟು ಪಡೆಯದ ವಿದ್ಯಾರ್ಥಿಗಳಿಗೆ ನೊಟೀಸ್ ನೀಡಲಾಗಿದೆ. ಕೆಲವು ಕಾಲೇಜುಗಳಲ್ಲಿ ಒಂದೇ IP ಅಡ್ರೆಸ್ ನಿಂದ ಆಪ್ಶನ್ ಎಂಟ್ರಿ ಅಗಿರೋದು ಗಮನಕ್ಕೆ ಬಂದಿದೆ.ನಾವೇ ಪ್ರಾಥಮಿಕ ತನಿಖೆ ಮಾಡಿ ಮಾಹಿತಿ ಸಂಗ್ರಹ ಮಾಡಿ ಪೊಲೀಸರಿಗೆ ತನಿಖೆ ಮಾಡಲು ದೂರು ಕೊಟ್ಟಿದ್ದೇವೆ. ಈ ಅಕ್ರಮದ ಜಾಲ ಪತ್ತೆಗೆ ದೂರು ನೀಡಲಾಗಿದ್ದು, ಪೊಲೀಸರು 10 ಜನರನ್ನ ಬಂಧನ ಮಾಡಿದ್ದಾರೆ.ಇದಕ್ಕೆ ಯಾರು ಕಿಂಗ್ ಪಿನ್ ಅಂತ ಪತ್ತೆ ಹಚ್ಚಬೇಕು ಹೆಚ್ಚಿನ ತನಿಖೆ ಆಗ್ತಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ತೀವಿ.
ಕೆಇಎ ಬೋರ್ಡ್ ಇದರಲ್ಲಿ ಶಾಮೀಲು ಆಗಿಲ್ಲ. ಅಲ್ಲಿ ಕೆಲಸ ಮಾಡ್ತಿರೋ ಅವಿನಾಶ್ ಎಂಬ ಹುಡುಗ ಮಾಹಿತಿ ಕೊಟ್ಟಿದ್ದಾನೆ ಇದರ ಬಗ್ಗೆ ತನಿಖೆ ಆಗಬೇಕು.
ಪೊಲೀಸರು ಕೊಡೋ ವರದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟ್ ಬ್ಲ್ಯಾಕ್ ನಿಂದ ಅನ್ಯಾಯವಾಗಿದೆ. ಇದನ್ನ ನಿಷ್ಪಕ್ಷಪಾತವಾಗಿ ತನಿಖೆಗೆ ಮಾಡ್ತೀವಿ. ಕಾಲೇಜುಗಳ ಮೇಲೆ ಕ್ರಮಕ್ಕೆ ಪೊಲೀಸರು ವರದಿ ಕೊಡಲಿ ಪೊಲೀಸರು ವರದಿ ಕೊಟ್ಟ ಬಳಿಕ ಮುಂದಿನ ಕ್ರಮ ತೆಗೆದುಕೊಳ್ತೀವಿ ಎಂದು ತಿಳಿಸಿದರು.
PublicNext
04/12/2024 10:27 pm