ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಯುವತಿಯಿಂದ 15 ಲಕ್ಷ ಪಡೆದು ವಂಚನೆ : ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದ ಯುವತಿ ಮೊಬೈಲ್ ನೋಟ್ ಪತ್ತೆ

ಬೆಂಗಳೂರು : ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ಯುವತಿ ಮಾಡಿಕೊಂಡಿದ್ದ ಆತ್ಮಹತ್ಯೆಗೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆತ್ಮಹತ್ಯೆಗೆ ಯುವತಿ ಸ್ನೇಹಿತನೇ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾಳೆ.

ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಪ್ರಿಯಾಂಕ ಮನೆಯ ಕಟ್ಟಡದ‌ ಮೊದಲ ಮಹಡಿಯಿಂದ ವೇಲಿನಿಂದ ಕುತ್ತಿಗೆ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಯುವತಿ ಸ್ನೇಹಿತೆಯರನ್ನ ಸಂಪರ್ಕಿಸಿದಾಗ ದಿಗಂತ್ ಎಂಬಾತನಿಗೆ ಹಣ ನೀಡಿ ವಂಚನೆಗೊಳಗಾಗಿದ್ದಳು ಎಂದು ತಿಳಿದುಬಂದಿತ್ತು‌. ಅಲ್ಲದೆ ಪ್ರಿಯಾಂಕಳ ಮೊಬೈಲ್ ಪರಿಶೀಲಿಸಿದಾಗ ಮೊಬೈಲ್ ನ ಬ್ಯಾಕ್ ಕವರ್ ನಲ್ಲಿ ಡೆತ್ ನೋಟ್ ಸಿಕ್ಕಿದೆ.

ಡೆತ್ ನೋಟ್ ನಲ್ಲಿ ಏನಿದೆ ?

"ಕಾಲೇಜಿನಲ್ಲಿ ಸ್ನೇಹಿತನಾಗಿದ್ದ ದಿಗಂತ್ ಎಂಬುವನಿಗೆ 15 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದೆ. ಚಿನ್ನ ವಾಪಸ್ ನೀಡದೆ ಸತಾಯಿಸುತ್ತಿದ್ದ. ನನ್ನ ಬಗ್ಗೆ ಬೇರೆಯವರ ಬಳಿ ಇಲ್ಲಸಲ್ಲದಿರುವುದನ್ನ ಹೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದ. ನನ್ನ ಸಾವಿಗೆ ದಿಗಂತ್ ಕಾರಣ' ಎಂದು ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ಮೃತೆಯ ಪೋಷಕರು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಮೃತ ಪ್ರಿಯಾಂಕಳ ತಂದೆ ಚಿನ್ನದ ವ್ಯಾಪಾರಿಯಾಗಿದ್ದಾರೆ.‌ ಇದನ್ನ ತಿಳಿದುಕೊಂಡೇ ದಿಗಂತ್ ಸ್ನೇಹ ಮಾಡಿದ್ದ‌. ಕ್ಯಾಸಿನೊದಲ್ಲಿ ಹಣ ಹೂಡಿದರೆ ದುಪ್ಪಟ್ಟು ಹಣ ಸಂಪಾದಿಸಿಕೊಡುವುದಾಗಿ ಆಮಿಷವೊಡ್ಡಿದ್ದ. ಇದನ್ನ ನಂಬಿ ಮನೆಯಲ್ಲಿ ಯಾರಿಗೂ ತಿಳಿಯದಂತೆ 15 ಲಕ್ಷ ಮೌಲ್ಯದ ಒಡವೆಗಳನ್ನ ದಿಗಂತ್ ಗೆ ನೀಡಿದ್ದಳು. ಸದ್ಯ ದಿಗಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡೆತ್ ನೋಟ್ ಆಧರಿಸಿ ಆತನ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Edited By : Shivu K
PublicNext

PublicNext

04/12/2024 01:43 pm

Cinque Terre

16.26 K

Cinque Terre

0

ಸಂಬಂಧಿತ ಸುದ್ದಿ