ಬೆಂಗಳೂರು: ಮಳೆಗೆ ನೀರು ನಿಂತು ರೋಡ್‌ಗಳೇ ಕಾಣುತ್ತಿಲ್ಲ, ಒಂದೆಡೆ ತಗ್ಗು ಗುಂಡಿಗಳ ಕಾಟ ಇಂತದ್ರಲ್ಲಿ ವಾಹನ ಚಲಾಯಿಸುವವರಿಗೆ ಸಂಕಷ್ಟಗಳು ತಪ್ಪಿದ್ದಲ್ಲ, ಹೀಗಿರುವಾಗ ಬೈಕ್ ಸವಾರನೊಬ್ಬ ರೋಡ್ ಹಂಪ್ ಗಮನಿಸದೆ ಬೈಕ್‌ನಲ್ಲಿ ಹಾರಿ ಬಿದ್ದಿದ್ದಾನೆ.
ಖಾಲಿ ರೋಡ್ ನಲ್ಲಿ ವೇಗವಾಗಿ ಬಂದು ಬೈಕ್ ಸವಾರ ಪಲ್ಟಿಯಾಗಿರೋ ಘಟನೆ ಜಿಗಣಿಯ ಡಬಲ್ ರೋಡ್ ಬಳಿ ನಡೆದಿದೆ.
ನಿನ್ನೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಹಂಪ್ ಬಳಿ ಬೈಕ್ ಕಂಟ್ರೋಲ್ ಸಿಗದೆ ಹಂಪ್ ಎಗರಿಸಿ ಹಾರಿ ಬಿದ್ದಿದ್ದಾನೆ. ಘಟನೆಯ ದೃಶ್ಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದ್ದು, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
PublicNext
04/12/2024 11:36 am