ಬೆಂಗಳೂರು : ನಿನ್ನೆ ಬೆಳಿಗ್ಗೆ ವೈಟ್‌ಫೀಲ್ಡ್ ಬಳಿ ಬಿಎಂಟಿಸಿ ಬಸ್ ಟೈಯರ್ ಬ್ಲಾಸ್ಟ್ ಆಗಿ, ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಬೆಳಗ್ಗೆ 9:30ಕ್ಕೆ ವೈಟ್ ಫೀಲ್ಡ್ ಬಳಿಯ ಕೆಟಿಪಿಓ ಬಸ್ ಸ್ಟ್ಯಾಂಡ್ ಬಳಿ ಘಟನೆ ನಡೆದಿದೆ.
ಐಟಿಪಿಎಲ್‌ನಿಂದ ಸಿಲ್ಕ್ ಬೋರ್ಡ್ ಕಡೆ ವೇಗವಾಗಿ ಬಸ್ ಸಂಚರಿಸುತ್ತಿರುವಾಗಲೇ ಹಿಂಭಾಗದ ಒಳಚಕ್ರ ಬ್ಲಾಸ್ಟ್ ಆಗಿ, ಚಕ್ರದ ಮೇಲ್ಬಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರಿಗೆ ಕೈ ಮತ್ತು ಕಾಲಿಗೆ ಗಾಯವಾಗಿದೆ.
ಗಾಯಗೊಂಡ ಇಬ್ಬರು ಪ್ರಯಾಣಿಕರು ಉತ್ತರಪ್ರದೇಶದ ಮೂಲದವರಾಗಿದ್ದು, ಇಬ್ಬರೂ ಪ್ರಯಾಣಿಕರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
PublicNext
04/12/2024 04:07 pm