ಬೆಂಗಳೂರು: ಇಂದು ಮುಂಜಾನೆ ಬನ್ನೇರುಘಟ್ಟ ರಸ್ತೆಯ ನೈಸ್ ಜಂಕ್ಷನ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ ಸರಬರಾಜು ಮಾಡುತ್ತಿದ್ದ ಟ್ಯಾಂಕತ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆ ಸಿಬ್ಬಂದಿ ಸೇರಿದಂತೆ ನೈಸ್ ಸಂಸ್ಥೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿ ಘಟನೆ ನಡೆದಿದೆ. ಟ್ಯಾಂಕರ್ ಲೀಕ್ ಆಗಾದ ಪರಿಣಾಮ ಯಾವೂದೆ ಅಹಿತಕರ ಘಟನೆಗಳು ಸಂಭವಿಸಿಲ್ಲ. ಮುಂಜಾನೆ 3 ಗಂಟೆಗೆ ಘಟನೆ ನಡೆದಿದ್ದು, ಕೇರಳದ ಕೊಚ್ಚಿ ಯಿಂದ ಮಂಗಳೂರು ಹೈವೆಯಲ್ಲಿರೋ ಸೋಲೂರು ಬಳಿ ಇರುವ ಭಾರತ್ ಗ್ಯಾಸ್ ಪ್ಲಾಂಟ್ ಗೆ ಎಲ್ ಪಿ ಜಿ ಸಾಗಿಸುತ್ತಿದ್ರು ಎಂದು ತಿಳಿದು ಬಂದಿದೆ.
PublicNext
04/12/2024 02:27 pm